Asianet Suvarna News Asianet Suvarna News

News Hour: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ; ತೆಲಂಗಾಣ-ಛತ್ತೀಸ್‌ಗಢ ಕಾಂಗ್ರೆಸ್‌, ವಿಜೋರಾಂ ಅತಂತ್ರ?


ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಗುರುವಾರ ತೆಲಂಗಾಣದಲ್ಲಿ ಚುನಾವಣೆ ಮುಕ್ತಾಯವಾದ ಬೆನ್ನಲ್ಲಿಯೇ ಎಕ್ಸಿಟ್‌ ಪೋಲ್‌ಗಳು ಬಹಿರಂಗವಾಗಿದೆ.

ಬೆಂಗಳೂರು (ನ.30): ಇಂದು ಪ್ರಕಟವಾದ ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು ಲೆಕ್ಕಹಾಕಿ ಸರಾಸರಿಯ ಆಧಾರದಲ್ಲಿ ಪೋಲ್‌ ಆಫ್‌ ಪೋಲ್ಸ್‌ ನೋಡುವುದಾದರೆ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಅಲೆ ಏಳಲಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ. ಛತ್ತೀಸ್‌ಗಢದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಇನ್ನು ಮಿಜೋರಾಂ ಅತಂತ್ರವಾಗಲಿದೆ ಎಂದು ಅಂದಾಜಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದ್ದರೆ, ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಪಡೆಯಬಹುದು ಎನ್ನಲಾಗಿದೆ. ಇನ್ನು ತೆಲಂಗಾಣ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸರಳ ಬಹುಮತ ಪಡೆಯಲಿದೆ ಎನ್ನುವ ಅಂದಾಜು ಸಿಕ್ಕಿದೆ.

Exit Poll: ಕಾಂಗ್ರೆಸ್‌ನ ಪ್ರಯತ್ನಕ್ಕೆ ಒಲಿಯಲಿದೆಯೇ ತೆಲಂಗಾಣ?

ಈ ಎಲ್ಲಾ ಎಕ್ಸಿಟ್‌ ಪೋಲ್‌ಗಳಿಗೆ ಡಿಸೆಂಬರ್‌ 3 ರಂದು ತೆರೆ ಬೀಳಲಿದ್ದು, ಐದೂ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಕೇಂದ್ರ ಚುನಾವಣಾ ಆಯೋಗ ಭಾನುವಾರ ಪ್ರಕಟ ಮಾಡಲಿದೆ.

Video Top Stories