Exit Poll: ಕಾಂಗ್ರೆಸ್‌ನ ಪ್ರಯತ್ನಕ್ಕೆ ಒಲಿಯಲಿದೆಯೇ ತೆಲಂಗಾಣ?


ಪಂಚರಾಜ್ಯ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವ ಸೂಚನೆ ಸಿಕ್ಕಿದೆ. ಇದು ಕಾಂಗ್ರೆಸ್‌ನ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
 

First Published Nov 30, 2023, 8:57 PM IST | Last Updated Nov 30, 2023, 8:57 PM IST

ಬೆಂಗಳೂರು (ನ.30): ದೇಶದ ಅತ್ಯಂತ ಹೊಸ ರಾಜ್ಯವಾಗಿರುವ ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಮುನ್ನಡೆದಿದೆ ಎಂದು ಎಕ್ಸಿಟ್‌ ಪೋಲ್‌ಗಳು ಭವಿಷ್ಯ ನುಡಿದಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ಕಾಂಗ್ರೆಸ್‌ ಪಕ್ಷ ಮಾಡಿದ ಪರಿಶ್ರಮಕ್ಕೆ ಸಿಕ್ಕ ಯಶಸ್ಸು ಎನ್ನಲಾಗುತ್ತಿದೆ. ಮೂರು ತಿಂಗಳ ಹಿಂದೆ ತೆಲಂಗಾಣದಲ್ಲಿ ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಕೇಳಿದ್ದರೆ, ಎಲ್ಲರ ಬಾಯಲ್ಲೂ ಬಿಆರ್‌ಎಸ್‌ ಹೊರತಾಗಿ ಬೇರೆ ಯಾವ ಹೆಸರೂ ಬಂದಿರಲಿಲ್ಲ. ಆದರೆ, ಕಳೆದ ಮೂರು ತಿಂಗಳಲ್ಲಿ ತೆಲಂಗಾಣವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಆತ್ಮಸ್ಥೈರ್ಯ ಎಕ್ಸಿಟ್‌ ಪೋಲ್‌ನಿಂದ ಬಂದಿದೆ.

Exit Poll: ತೆಲಂಗಾಣದಲ್ಲಿ ಬಿಆರ್‌ಎಸ್‌ ಫ್ಲಾಪ್‌, ಕಾಂಗ್ರೆಸ್‌ಗೆ ಜಯದ ನಗು?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 19 ಸೀಟು ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ತೀರಾ ಮೂರು ತಿಂಗಳ ಹಿಂದಿನವರೆಗೂ ಪೈಪೋಟಿಯಲ್ಲೇ ಇದ್ದಿರಲಿಲ್ಲ. ಆದರೆ, ಈ ಮೂರು ತಿಂಗಳ ಅವಧಿಯಲ್ಲಿ ಕಾಂಗ್ರೆಸ್‌ ಘೋಷಿಸಿದ ಗ್ಯಾರಂಟಿಗಳು ತೆಲಂಗಾಣ ಫಲಿತಾಂಶದಲ್ಲಿ ವರವಾಗಿದೆ.