
News Hour: ಬಿಜೆಪಿಯಲ್ಲಿ ಭಿನ್ನಮತ, ಜೆಡಿಎಸ್‌ನಿಂದ ಶಿವರಾಮೇಗೌಡ ಕಿಕ್ ಔಟ್, ಇಡೀ ದಿನದ ಸಮಗ್ರ ಸುದ್ದಿ
ಬೆಳಗಾವಿ ಬಿಜೆಪಿಯಲ್ಲಿ ಮೊದಲನಿಂದಲೂ ತಿಕ್ಕಾಟ ಇತ್ತು. ಆ ತಿಕ್ಕಾಟ ವಿಧಾನಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಬಹಿರಂಗವಾಗಿದೆ.
ಬೆಂಗಳೂರು, (ಜ.31): ಬೆಳಗಾವಿ ಬಿಜೆಪಿಯಲ್ಲಿ ಮೊದಲನಿಂದಲೂ ತಿಕ್ಕಾಟ ಇತ್ತು. ಆ ತಿಕ್ಕಾಟ ವಿಧಾನಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಬಹಿರಂಗವಾಗಿದೆ.
ಮತ್ತೊಂದೆಡೆ ಮೈಸೂರಿನಲ್ಲಿ ಗ್ಯಾಸ್ ಪೈಪ್ ಲೈನ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಸಮರ ತಾರಕಕ್ಕೇರಿದೆ. ಇದರಿಂದ ಎಚ್ಚೆತ್ತ ನಳಿನ್ ಕುಮಾರ್ ಕಟೀಲ್, ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಚಿವ ಆನಂದ್ ಸಿಂಗ್ ಭೇಟಿಯಾಗಿ ಮಾತನಾಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಜೆಡಿಎಸ್‌ನಿಂದ ಎಲ್.ಆರ್. ಶಿವರಾಮೇಗೌಡ ಉಚ್ಚಾಟನೆ ಮಾಡಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ದಿ. ಜಿ.ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಲ್.ಆರ್. ಶಿವರಾಮೇಗೌಡ ಉಚ್ಚಾಟನೆ ಮಾಡಲಾಗಿದೆ. ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಚಾಟನೆ ಮಾಡಿ ಆದೇಶ ನೀಡಲಾಗಿದೆ. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಉಚ್ಚಾಟಿಸಿ ಆದೇಶಿಸಲಾಗಿದೆ.