News Hour: ಲೋಕಸಭಾ ಸಮರಕ್ಕೆ ಬಿಜೆಪಿ ಮೊದಲ ಪಟ್ಟಿ ರಿಲೀಸ್​


ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು 195 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.2): ಲೋಕಸಭಾ ಸಮರಕ್ಕೆ ಬಿಜೆಪಿ ಮೊದಲ ಪಟ್ಟಿ ರಿಲೀಸ್​ ಆಗಿದೆ. 34 ಕೇಂದ್ರ ಸಚಿವರು, ಇಬ್ಬರು ಮಾಜಿ ಸಿಎಂ ಸೇರಿ 195 ಹೆಸರು ಘೋಷಣೆಯಾಗಿದೆ. ವಾರಾಣಸಿಯಿಂದ ಮೋದಿ, ಗಾಂಧಿನಗರಿಂದ ಅಮಿತ್ ಶಾ ಸ್ಪರ್ಧೆ ಮಾಡಲಿದ್ದಾರೆ.

ಬಿಜೆಪಿಯ ಮೊದಲ ಪಟ್ಟಿ ಹಿರಿಯ ನಾಯಕರಿಗೆ ಶಾಕ್‌ ನೀಡಿದೆ. ಬಿಜೆಪಿ ಹಿರಿಯ ನಾಯಕಿ ಮೀನಾಕ್ಷಿ ಲೇಖಿ, ಮಾಜಿ ಸಚಿವ ಹರ್ಷವರ್ಧನ್‌ ಹಾಗೂ ಮಧ್ಯಪ್ರದೇಶದ ಭೋಪಾಲ್‌ನಿಂದ ಸಂಸದರಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ಗೆ ಟಿಕೆಟ್‌ ನಿರಾಕರಿಸಲಾಗಿದೆ.

Ram temple effect: ರಾಮಚರಿತಮಾನಸ್‌ಗೆ ನಿರೀಕ್ಷೆಗೂ ಮೀರಿದ ಬೇಡಿಕೆ, ಗೀತಾ ಪ್ರೆಸ್‌ ಫುಲ್‌ ಖುಷ್‌!

ಇನ್ನೊಂದೆಡೆ, ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ಚಹರೆ ಪತ್ತೆಯಾಗಿದೆ. ಮುಖಕ್ಕೆ ಮಾಸ್ಕ್​.. ಬಿಳಿ ಟೋಪಿ ಧರಿಸಿ ಬ್ಯಾಗ್​ ಇಟ್ಟು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರವೆ ಇಡ್ಲಿ ತಿಂದು ಹೋಟೆಲ್​ಅನ್ನೇ ಆರೋಪಿ ಸ್ಪೋಟಿಸಿದ್ದ.

Related Video