ಬಿಜೆಪಿ-ಜೆಡಿಎಸ್ ನಾಯಕರಿಗೆ ಅಮಿತ್ ಶಾ ಟಾಸ್ಕ್, ಚೆನ್ನಪಟ್ಟಣ ರೋಡ್ ಶೂ ಮೂಲಕ ಸ್ಪಷ್ಟ ಸಂದೇಶ!

ಮೈತ್ರಿ ನಾಯಕರಿಗೆ ಒಗ್ಗಟ್ಟಿನ ಪಾಠ, 28 ಕ್ಷೇತ್ರ ಗೆಲ್ಲಿಸಲು ಅಮಿತ್ ಶಾ ಪ್ಲಾನ್, ಚನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ, ಡಿಕೆಶಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ, ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಸಿಎಂ ಬದಲಾವಣೆ ಗಾಳಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜೊತೆ ಕೋರ್ ಕಮಿಟಿ ಸಭೆ ನಡೆಸಿದ್ದಾರೆ. ಯಾವುದೇ ಭಿನ್ನಾಭಿಪ್ರಾಯಗಳನ್ನ ಸ್ಥಳೀಯ ಮಟ್ಟದಲ್ಲೇ ಬಗೆಹರಿಸಬೇಕು ಎಂದಿದ್ದಾರೆ. ಒಗ್ಗಟ್ಟಾಗಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಸೂಚಿಸಿದ್ದಾರೆ. ಸತತ ಸಭೆ, ಸಮಾವೇಶ ಬಳಿಕ ಅಮಿತ್ ಶಾ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಭದ್ರಕೋಟೆ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿದ್ದಾರೆ. ತೆರೆದ ವಾಹನದ ಮೂಲಕ ರೋಡ್ ಶೋ ನಡೆಸಿದ ಅಮಿತ್ ಶಾ ಬೆಂಗಳೂರು ಗ್ರಾಮೀಣ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಪರ ಪ್ರಚಾರ ಮಾಡಿದ್ದಾರೆ. ಇಂದು ಅಮಿತ್ ಶಾ ಸಭೆ, ಕಾರ್ಯತಂತ್ರದ ಮಾಹಿತಿ ಇಲ್ಲಿದೆ. 

Related Video