Asianet Suvarna News Asianet Suvarna News

18 ಹಾಲಿ ಬಿಜೆಪಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಇಲ್ಲ!?

ಮುಂದಿನ ಅಂದ್ರೆ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ 18 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಕಟ್ ಆಗುವ ಸಾಧ್ಯತೆಗಳಿವೆ.  18 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಕೊಡದಂತೆ ನಾಯಕರೇ ಹೇಳಿದ್ದಾರಂತೆ. ನಿರೀಕ್ಷಿತ ಜನಪ್ರಿಯತೆ ಪಡೆಯುವಲ್ಲಿ ವಿಫಲವಾಗಿದ್ದರಿಂದ 18 ಹಾಲಿ ಶಾಸಕರಿಗೆ ಟಿಕೆಟ್ ನೀಡದಂತೆ ಸಲಹೆ ನೀಡಲಾಗಿ

ಬೆಂಗಳೂರು, (ಏ.28): ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರ ಬಾಕಿ ಇದೆ. ಆಗಲೇ ಬಿಜೆಪಿ ಕ್ಷೇತ್ರವಾರು ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದೆ.  ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲೇಬೇಕೆಂದು ಹೈಕಮಾಂಡ್‌ ಸ್ಥಳೀಯ ನಾಯಕರಿಗೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕನಿಷ್ಠ 150 ಸೀಟು ಗೆಲ್ಲಲು ಪ್ಲಾನ್ ಮಾಡುತ್ತಿದೆ. ಯಾರಿಗೆ ಟಿಕೆಟ್ ನೀಡಿದರೆ ವರ್ಕೌಟ್ ಆಗುತ್ತೆ ಯಾರಿಗಿಲ್ಲ ಎನ್ನುವ ಮಾಹಿತಿ ಕಲೆಹಾಕುತ್ತಿದೆ.

18 ಹಾಲಿ ಶಾಸಕರಿಗಿಲ್ಲ ಟಿಕೆಟ್: ಇಲ್ಲಿದೆ ಬಿಜೆಪಿ ಹೈಕಮಾಂಡ್‌ ನಿರ್ಧಾರದ ಹಿಂದಿನ ಕಾರಣ

ಇನ್ನು, ಮುಂದಿನ ಅಂದ್ರೆ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ 18 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಕಟ್ ಆಗುವ ಸಾಧ್ಯತೆಗಳಿವೆ.  18 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಕೊಡದಂತೆ ನಾಯಕರೇ ಹೇಳಿದ್ದಾರಂತೆ. ನಿರೀಕ್ಷಿತ ಜನಪ್ರಿಯತೆ ಪಡೆಯುವಲ್ಲಿ ವಿಫಲವಾಗಿದ್ದರಿಂದ 18 ಹಾಲಿ ಶಾಸಕರಿಗೆ ಟಿಕೆಟ್ ನೀಡದಂತೆ ಸಲಹೆ ನೀಡಲಾಗಿದೆ.

Video Top Stories