ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ; ಅಗಲಿದ ಗೆಳೆಯನನ್ನು ಧರ್ಮರಾಯ ಎಂದು ಕುಮಾರಣ್ಣ ಕಣ್ಣೀರಿಟ್ಟಿದ್ದೇಕೆ..?
ಸಜ್ಜನ ರಾಜಕಾರಣಿ, ಜೆಡಿಎಸ್ ಶಾಸಕ, ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ (65) ಅವರು ಸೋಮವಾರ ರಾತ್ರಿ ಸಾವಿಗೆ ಶರಣಾಗಿದ್ದಾರೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಜನ ಶತಾಬ್ದಿ ರೈಲಿಗೆ ಕಡೂರು ತಾಲೂಕಿನ ಗುಣಸಾಗರ ಬಳಿ ಸಂಜೆ 6.30ರ ವೇಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು (ಡಿ. 30): ಸಜ್ಜನ ರಾಜಕಾರಣಿ, ಜೆಡಿಎಸ್ ಶಾಸಕ, ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ (65) ಅವರು ಸೋಮವಾರ ರಾತ್ರಿ ಸಾವಿಗೆ ಶರಣಾಗಿದ್ದಾರೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಜನ ಶತಾಬ್ದಿ ರೈಲಿಗೆ ಕಡೂರು ತಾಲೂಕಿನ ಗುಣಸಾಗರ ಬಳಿ ಸಂಜೆ 6.30ರ ವೇಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ರಾಜ್ಯರಾಜಕಾರಣದಲ್ಲಿ ತಲ್ಲಣ ಮೂಡಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಾದಿಯಾಗಿ ಪಕ್ಷಾತೀತವಾಗಿ ಹಲವು ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.
'ಧರ್ಮೇಗೌಡ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ನೋವುಂಟು ಮಾಡಿದೆ. ನನ್ನ ಜೀವನದಲ್ಲಿ ಅತ್ಯಂತ ಘೋರವಾದಂತಹ ಘಟನೆ ಇದು. ಪರಿಷತ್‌ನ ಅಧಿವೇಶನಕ್ಕೂ ಮುನ್ನ ತಮ್ಮ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ಅವರಿಗೆ ಸೂಕ್ತ ಸಲಹೆ ನೀಡಿದ್ದು, ಸಭಾಪತಿ ಸ್ಥಾನದಲ್ಲಿ ಕೂರಬೇಡಿ ಎಂದು ಹೇಳಿದ್ದೆ. ಅವರ ಕೊನೆ ಗಳಿಕೆಯ ರಾಜಕೀಯ ಜೀವನ ತೀವ್ರ ನೋವುಂಟು ಮಾಡಿದೆ' ಎಂದು ಹೇಳಿದರು.'ಆತ ನನ್ನ ಆತ್ಮೀಯ ಸ್ನೇಹಿತನಾಗಿದ್ದವನು. ಧರ್ಮರಾಯನಂತಹ ವ್ಯಕ್ತಿತ್ವ ಅವನದ್ದು' ಎಂದು ಕುಮಾರಣ್ಣ ಕಣ್ಣೀರಿಟ್ಟಿದ್ಧಾರೆ. ಹಾಗಾದರೆ ದೇವೇಗೌಡ್ರ ಕುಟುಂಬಕ್ಕೂ, ಧರ್ಮೇಗೌಡ್ರಿಗೂ ಅವಿನಾಭಾವ ಸಂಬಂಧ ಹೇಗಿತ್ತು..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!