'ನಾಚಿಕೆ ಆಗುವಂಥದ್ದು ನಾನೇನ್ ಮಾಡಿದ್ದೇನೆ..ಸುಮ್ನೆ ಕುಂತ್ಕೋ' ಚಲುವರಾಯಸ್ವಾಮಿಗೆ ಎಚ್‌ಡಿಕೆ ಸಿಟ್ಟು
ಸದನದಲ್ಲಿ KSRTC ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ ಪ್ರತಿಧ್ವನಿಸಿದೆ. ಎಚ್‌ಡಿಕೆ ಹಾಗೂ ಚೆಲುವರಾಯಸ್ವಾಮಿ ನಡುವೆ ಏಕವಚನದಲ್ಲೇ ಮಾತಿನ ಸಮರವೇ ನಡೆದಿದೆ.
ಬೆಂಗಳೂರು (ಜು.6): ಕೆಎಸ್‌ಆರ್‌ಟಿಸಿ ಚಾಲಕನ ಆತ್ಮಹತ್ಯೆ ಕೇಸ್ ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದೆ. ಇದು ಸಚಿವ ಚೆಲುವರಾಯಸ್ವಾಮಿ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವೆ ಏಕವಚನದಲ್ಲಿಯೇ ವಾಕ್ಸಮರಕ್ಕೆ ಕಾರಣವಾಯಿತು.
ನಿಮಗೆ ನಮ್ಮ ಸಂಖ್ಯೆಯನ್ನು ನೋಡೋಕೆ ಆಗ್ತಾ ಇಲ್ಲ. ನಾಚಿಕೆ ಆಗಬೇಕು ನಿಮಗೆ ಎಂದು ಚಲುವರಾಯಸ್ವಾಮಿ ಹೇಳಿದ ಮಾತಿಗೆ ಸಿಡಿದೆದ್ದ ಕುಮಾರಸ್ವಾಮಿ, ನಿನ್ನ ಥರ ನಾಚಿಕೆ ಪಡುವಂಥದ್ದು ನಾನೇನೂ ಮಾಡಿಲ್ಲ. ಕೂರಯ್ಯ ಸಾಕು. ಏನ್ ನಾಚಿಕೆ ಆಗಬೇಕು. ಆ ಪದವನ್ನು ಕಡತದಿಂದ ವಾಪಾಸ್ ತೆಗೆಯಿರಿ. ನಾಚಿಕೆ ಆಗುವಂಥದ್ದು ನಾನೇನ್ ಮಾಡಿದ್ದೇನೆ. ಮಾಡ್ಕಂಡಿರೋದು ನೀವುಗಳು ಎಂದು ಹೇಳುವ ಮೂಲಕ ಕೆಂಡಾಮಂಡಲರಾದರು.
'ನಿನಗೇನ್ ಗೊತ್ತು ಮಂಡ್ಯ ಬಗ್ಗೆ?' ಗದರಿದ ಎಚ್‌ಡಿಕೆ, ಸಚಿವ ರಾಜಣ್ಣ ಗಪ್‌ಚುಪ್!
ಹತಾಶೆಯಾಗಿ ಮಾತನಾಡಬೇಡಿ ಎನ್ನುವ ಮಾತಿಗೂ ಕುಮಾರಸ್ವಾಮಿ ಸಿಟ್ಟಿನಿಂದಲೇ ಉತ್ತರ ನೀಡಿದರು. ಪಂಚಾಯ್ತಿ ಮಟ್ಟದಿಂದಲೇ ರಾಜಕೀಯ ಮಾಡ್ತಾ ಇರೋದು ನೀವುಗಳು ಎಂದು ಕುಮಾರಸ್ವಾಮಿ ಹೇಳಿದರು.