'ನಿನಗೇನ್ ಗೊತ್ತು ಮಂಡ್ಯ ಬಗ್ಗೆ?' ಗದರಿದ ಎಚ್‌ಡಿಕೆ, ಸಚಿವ ರಾಜಣ್ಣ ಗಪ್‌ಚುಪ್!

ಎಚ್‌ಡಿ ಕುಮಾರಸ್ವಾಮಿ ಹಾಗೂ ಚಲುವರಾಯಸ್ವಾಮಿ ವಾಗ್ವಾದದ ನಡುವೆ ಎಂಟ್ರಿಯಾದ ಸಹಕಾರ ಸಚಿವ ಕೆಎನ್‌ ರಾಜಣ್ಣಗೆ ಗದರಿದ ಎಚ್‌ಡಿಕೆ, ಮಂಡ್ಯ ಬಗ್ಗೆ ನಿಮಗೇನ್‌ ಗೊತ್ತು ಎಂದು ಪ್ರಶ್ನೆ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜು.6): ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಟಾಕ್‌ವಾರ್‌ ರಂಗೇರಿತ್ತು. ಕುಮಾರಸ್ವಾಮಿಯಂಥ ಸರ್ಕಾರದ ವಿರುದ್ಧ ಕುದ್ದುಹೋಗಿದ್ದರು. ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ವೇಳೆ ಮಧ್ಯಪ್ರವೇಶಿಸಿದ ಸಹಕಾರ ಸಚಿವ ಕೆಎನ್‌ ರಾಜಣ್ಣಗೂ ಎಚ್‌ಡಿಕೆ ಗದರಿದ ಪ್ರಸಂಗ ನಡೆಯಿತು.

'ಮಂಡ್ಯ ಬಗ್ಗೆ ನಿನಗೇನ್‌ ಗೊತ್ತು. ಸುಮ್ನೆ ಕುಳಿತುಕೊಳ್ಳಿ..' ಎಂದು ಕುಮಾರಸ್ವಾಮಿ ಹೇಳಿದ ಬೆನ್ನಲ್ಲಿಯೇ ರಾಜಣ್ಣ ಕೂಡ ಸೈಲೆಂಟ್‌ ಆದರು. ನೀವು ಅಲ್ಲೆಲ್ಲೋ ಮಾಗಡಿಯಿಂದ ಬಂದಿದ್ದೀರಿ. ಮಂಡ್ಯದ ಬಗ್ಗೆ ಏನ್‌ ಗೊತ್ತಿದೆ ಎಂದು ಎಚ್‌ಡಿಕೆ ಹೇಳಿದರು.

'ಸೆಕ್ಯುಲರ್ ಅಂತಾ ಹೇಳಿ ದೇವೇಗೌಡರ ಕುತ್ತಿಗೆ ಕುಯ್ದವರು ನೀವು..' ಸಿದ್ಧುಗೆ ಎಚ್‌ಡಿಕೆ ವಾಗ್ಭಾಣ!

ಸೂಸೈಡ್‌ ನೋಟ್‌ ಅಲ್ಲ ಅದು ಎಂದು ರಾಜಣ್ಣ ಹೇಳಿದ ಮಾತಿಗೆ, ಹಾಗಿದ್ರೆ ಈ ನೋಟ್‌ಅನ್ನು ಏನ್‌ ಹೇಳ್ಬೇಕು ಅಂತಾ ನೀವೇ ಸದನಕ್ಕೆ ಹೇಳಿ. ನೀವು ಅನುಭವಸ್ಥರಿದ್ದೀರಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Related Video