ನನ್ನ ಅನ್ನ ತಿಂದು ನನಗೇ ಬೈತಿರಾ?: ಉಗ್ರಪ್ಪ, ಸಲೀಂಗೆ ಡಿಕೆಶಿ ಕ್ಲಾಸ್!
ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಜೊತೆಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ, ಆದರೀಗ ಈ ಹೇಳಿಕೆ ಕೊಟ್ಟ ನಾಯಕರಿಗೆ ಡಿ. ಕೆ. ಶಿವಕುಮಾರ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ಸಲೀಂರನ್ನು ಅಮಾನತುಗೊಳಿಸುವಂತೆ ಸೂಚಿಸಿದ್ದಾರೆ.
ಬೆಂಗಳೂರು(ಅ.13): ಮಾಜಿ ಸಂಸದ ವಿ.ಎಸ್ ಉಗ್ರಪ್ಪ(VS Ugrappa) ಹಾಗೂ ಕೆಪಿಸಿಸಿ(KPCC) ಮಾಧ್ಯಮ ಸಂಯೋಜಕ ಸಲೀಂ ಜೊತೆಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ(DK Shivakumar) ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ, ಆದರೀಗ ಈ ಹೇಳಿಕೆ ಕೊಟ್ಟ ನಾಯಕರಿಗೆ ಡಿ. ಕೆ. ಶಿವಕುಮಾರ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ಸಲೀಂರನ್ನು ಅಮಾನತುಗೊಳಿಸುವಂತೆ ಸೂಚಿಸಿದ್ದಾರೆ.
ಹೌದು ಡಿಕೆಶಿ ವಿರುದ್ಧ ಹೇಳಿಕೆ ಕೊಟ್ಟಿದ್ದ ಸಲೀಂ(Saleem), ಅವರು ದೊಡ್ಡ ಸ್ಕ್ರ್ಯಾಮ್ ಇದೆ, ಕೆದುಕುತ್ತಾ ಹೋದ್ರೆ ಇವರದ್ದು ಹೊರಬರುತ್ತೆ. ಅವರ ಹುಡುಗನ ಹತ್ರನೇ 50 ರಿಂದ 100 ಕೋಟಿ ಇದೆ ಎಂದರೆ, ಡಿಕೆ ಹತ್ರ ಇನ್ನೆಷ್ಟು ಇರಬೇಕು? ಎಂದು ಪ್ರಶ್ನಿಸಿದ್ದರು. ಅಲ್ಲದೇ ಈ ಸಂದರ್ಭದಲ್ಲಿ ಸಿದ್ದರಾಮಯ್ಯರನ್ನು ಹೊಗಳಿದ್ದರು.
ಈ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ಸಲೀಂ ಅವರಿಗೆ ಕರೆ ಮಾಡಿದ ಡಿಕೆಶಿ ನನ್ನ ಅನ್ನ ತಿಂದು ನನಗೆ ಬೈತಿರಾ..? ನೀವೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಇರೋಕೆ ನಾಲಾಯಕ್ ಎಂದು ಕಿಡಿ ಕಾರಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೋಡಿ