ಸಿದ್ದರಾಮಯ್ಯ ಕ್ಷೇತ್ರಕ್ಕೆ ಡಿಕೆಶಿ ಭೇಟಿ: ಏನಿದು 'ನಿಗೂಢ' ರಹಸ್ಯ?
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಡಿ.ಕೆ ಶಿವಕುಮಾರ್ ನಿಗೂಢ ಸಂಚಾರ ಮಾಡಿದ್ದು, ಇದು ಭಾರೀ ಕುತೂಹಲ ಮೂಡಿಸಿದೆ.
ಬಾದಾಮಿಯ ಕೆರೂರಿನಲ್ಲಿ ಡಿ.ಕೆ ಶಿವಕುಮಾರ್ ಪ್ರತ್ಯಕ್ಷವಾಗಿದ್ದು, ಏಕಾಏಕಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಬೆಳಗಾವಿಯಿಂದ ನೇರವಾಗಿ ಕೆರೂರಿಗೆ ಆಗಮಿಸಿದ್ದ ಡಿಕೆಶಿ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮಾಹಿತಿ ನೀಡದೇ ಪಟ್ಟಣದಲ್ಲಿ ಕೆಲ ಹುಡುಗರನ್ನು ಮಾತನಾಡಿಸಿ ಹೋಗಿದ್ದಾರೆ. ಡಿಕೆಶಿಯ ಈ ನಡೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಸಿದ್ದರಾಮಯ್ಯ ಬೆಂಬಲಿಗರಿಗೂ ಸುಳಿವು ನೀಡದೇ ಡಿಕೆಶಿ ಕೆರೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳಿದ್ದಾರೆ. ಇನ್ನು ಡಿಕೆಶಿ ಕೆರೂರಿಗೆ ಬಂದು ಹೋಗಿರುವ ಫೋಟೊ ವೈರಲ್ ಆಗಿದೆ.