ಮಿನಿ ಸಮರದಲ್ಲಿ ಹಿರಿಯ ನಾಯಕರ ಪ್ರತಿಷ್ಠೆ ಪಣಕ್ಕೆ

ರಾಜ್ಯ ರಾಜಕಾರಣದಲ್ಲಿ ಮೂವರು ಹಿರಿಯ ನಾಯಕರಿಗೆ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಗೆಲುವು ಸಿದ್ದರಾಮಯ್ಯ, ದೇವೇಗೌಡ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ.

First Published Nov 11, 2024, 8:33 PM IST | Last Updated Nov 11, 2024, 8:33 PM IST

ರಾಜ್ಯ ರಾಜಕಾರಣದಲ್ಲಿ ಈ ಮೂವರು ಹಿರಿಯ ನಾಯಕರಿಗೆ ಬೈ ಎಲೆಕ್ಷನ್ ಪ್ರತಿಷ್ಠೆಯ ಕಣವಾಗಿದೆ. ಮೂರರಲ್ಲಿ ಎರಡು ಕ್ಷೇತ್ರ ಗೆಲ್ಲದೇ ಹೋದರೆ ಬಿಎಸ್ವೈ ಪುತ್ರನ ಅಧ್ಯಕ್ಷ ಪಟ್ಟಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಕಾಂಗ್ರೆಸ್ ಮೂರಲ್ಲಿ ಎರಡು ಕ್ಷೇತ್ರ ಗೆಲ್ಲದೇ ಹೋದರೂ ಸಿದ್ದರಾಮಯ್ಯನವರಿಗೆ ತೊಂದರೆ. ಹಾಗೆನೇ ಮೊಮ್ಮಗನಿಗೆ ಮೂರನೇ ಅಗ್ನಿ ಪರೀಕ್ಷೆಯಲ್ಲೂ ಜಯ ಸಿಗದಿದ್ದರೆ ಅದು ದೇವೇಗೌಡರ ಪ್ರತಿಷ್ಠೆಗೆ ಧಕ್ಕೆಯಾಗಲಿದೆ. ಹೀಗಾಗಿ ಈ ಮೂವರಿಗೂ ಬೈ ಎಲೆಕ್ಷನ್ ತುಂಬಾ ಮಹತ್ವದ್ದಾಗಿದೆ.

ಇದ್ಯಾವ ಲೆಕ್ಕಾ..? ಇದೆಂಥಹ ಚುನಾವಣೆ..? ಇದಕ್ಕಿಂತ ದೊಡ್ಡ ದೊಡ್ಡ ಎಲೆಕ್ಷನ್ ಎದುರಿಸಿದ್ದಾರೆ ಆ ಮೂವರು ನಾಯಕರು. ಆದ್ರೆ, ಆ ಹಿರಿಯ ಹುರಿಯಾಳುಗಳಿಗೀಗ ಮಿನಿ ಸಮರವೇ ಮಹಾಸಮರವಾಗಿ ಬದಲಾಗಿದೆ. ಒಬ್ಬಬ್ಬರಿಗೆ ಒಂದಲ್ಲ..ಹಲವು ಕಾರಣಕ್ಕೆ ಗೆಲುವು ಬೇಕೇ ಬೇಕು. ಮೊಮ್ಮಗನ ಸೋಲಿನ ಸರಪಳಿ ಕಳಚೋ ಮಹಾಯಜ್ಞಕ್ಕೆ ಮುಂದಾಗಿದ್ದಾರೆ ದೊಡ್ಡಗೌಡ್ರು.  ಮುಡಾ ಮಂಡೆಬಿಸಿ.. ಅಲುಗಾಡೋ ಕುರ್ಚಿ ಮಧ್ಯೆ, ನಾನು ಬಗ್ಗಲ್ಲ.. ಜಗ್ಗಲ್ಲ ಅಂತ ಪ್ರೂವ್ ಮಾಡ್ಕೊಳ್ಳೋಕೆ ರಣರಂಗದಲ್ಲಿ ಹೋರಾಡ್ತಿರೋದು ಟಗರು.. ಉಪಚುನಾವಣಾ ದಂಗಲ್ ಗೆದ್ದು ಪುತ್ರನ ಪಟ್ಟ ಗಟ್ಟಿ ಮಾಡೋ ಜವಾಬ್ದಾರಿ ಹೊತ್ತಿರೋದು ರಾಜಾಹುಲಿ. ಇದೇ ಈ ಇವತ್ತಿನ ಸುವರ್ಣ ಸ್ಪೆಷಲ್ ಧುರಂಧರ ದಂಗಲ್..

ಇದನ್ನೂ ಓದಿ: ಲವ್ ಬರ್ಡ್ಸ್ ದೂರ ಮಾಡಿದ ಬಿಗ್ ಬಾಸ್; ಹೊಂದಾಣಿಕೆ ಇಲ್ಲದವರನ್ನು ಜೋಡಿ ಮಾಡಿ ವೀಕ್ಷಕರ ದಿಕ್ಕು ತಪ್ಪಿಸಿದ್ಯಾಕೆ?

ಸಿದ್ದರಾಮಯ್ಯ, ದೇವೇಗೌಡ್ರ ಜೊತೆಗೆ ಬಿ.ಎಸ್.ಯಡಿಯೂರಪ್ಪನವರಿಗೂ ಈ ಚುನಾವಣೆ ನಿಜಕ್ಕೂ ಅಗ್ನಿಪರೀಕ್ಷೆ. ಹಾಗಿದ್ರೆ, ರಾಜಾಹುಲಿ ಪಾಲಿಗೆ ಈ ಮಿನಿಸಮರ ಯಾಕಷ್ಟು ಇಂಪಾರ್ಟೆಂಟ್ ಅಂತ ತೋರಿಸ್ತೀವಿ. ಈ ಬೈ ಎಲೆಕ್ಷನ್ ಬಿಎಸ್ ಯಡಿಯೂರಪ್ಪನವರಿಗೂ ತುಂಬಾ ಪ್ರಮುಖವಾಗಿದೆ. ಯಾಕೆಂದ್ರೆ ಈ ಮೂರು ಕ್ಷೇತ್ರಗಳ ಚುನಾವಣಾ ರಿಸಲ್ಟ್ ಅವರ ಮಗ ಬಿವೈ ವಿಜಯೇಂದ್ರ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಹೀಗಾಗಿ ಬಿಎಸ್ ಯಡಿಯೂರಪ್ಪನವರು ಮೂರಕ್ಕೆ ಮೂರು ಕ್ಷೇತ್ರ ಗೆಲ್ಲಲ್ಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಇದೇ ನವೆಂಬರ್ 13ರಂದು ಮೂರು ಕ್ಷೇತ್ರಗಳ ಬೈ ಎಲೆಕ್ಷನ್ಗೆ ಮತದಾನವಿದೆ. ಸೋಮವಾರ ಪ್ರಚಾರಕ್ಕೆ ಕೊನೇ ದಿನ. ಹೀಗಾಗಿ ಭಾನುವಾರ ಮೂರು ಕ್ಷೇತ್ರಗಳಲ್ಲಿ ಎಲ್ಲ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದವು. ಶನಿವಾರ ಸಂಡೂರಿನಲ್ಲಿ ಬಿಎಸ್ವೈ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರೂ ತಮ್ಮ ತಮ್ಮ ಅಭ್ಯರ್ಥಿ ಪರವಾಗಿ ಬಿರುಸಿನ ಪ್ರಚಾರ ಮಾಡಿದ್ದರು.  ಹಾಗಿದ್ರೆ ಭಾನುವಾರ ಯಾರೆಲ್ಲ ನಾಯಕರು ಏಲ್ಲಿಲ್ಲಿ ಪ್ರಚಾರದಲ್ಲಿ ತೊಡಗಿದ್ದರು ಅನ್ನೋದನ್ನು ಇಲ್ಲಿ ನೋಡೋಣ.

Video Top Stories