ಕಪ್ಪು ಚುಕ್ಕೆಯೇ ಇಲ್ಲ ಎಂದಿದ್ದ ಸಿಎಂಗೆ 'ಕಪ್ಪು ಕಾಗೆ' ಎಂದ ಛಲವಾದಿ ನಾರಾಯಣಸ್ವಾಮಿ!

ಮಾತು ಬೆಳ್ಳಿ, ಮೌನ ಬಂಗಾರ ಎನ್ನುವುದು ನಮ್ಮ ರಾಜಕಾರಣಿಗಳಿಗೆ ಎಲ್ಲಿ ಅರ್ಥವಾಗಬೇಕು? ಒಬ್ಬರು ನೀನು ಅಂದರೆ, ಮತ್ತೊಬ್ಬರು ನಿಮ್ಮಪ್ಪ ಅಂತಾರೆ. ಕರಿ ಕಾಗೆ ಅಂತೆ, ತೋಳ ಅಂತೆ, ನರಿ ಅಂತೆ.. ಅಬ್ಬಬ್ಬಾ, ಒಂದೊಂದು ಮಾತುಗಳೂ ಕರ್ಣ ಕಠೋರ.

Share this Video
  • FB
  • Linkdin
  • Whatsapp

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.. ಮಾತು ಬೆಳ್ಳಿ, ಮೌನ ಬಂಗಾರ.. ಇದೆಲ್ಲಾ ನಮ್ಮ ರಾಜಕಾರಣಿಗಳಿಗೆ ಎಲ್ಲಿ ಅರ್ಥವಾಗಬೇಕು? ಒಬ್ಬರು ನೀನು ಅಂದರೆ, ಮತ್ತೊಬ್ಬರು ನಿಮ್ಮಪ್ಪ ಅಂತಾರೆ. ಕರಿ ಕಾಗೆ ಅಂತೆ, ತೋಳ ಅಂತೆ, ನರಿ ಅಂತೆ, ಜೊಲ್ಲು ಸುರಿಸೋದಂತೆ. ಅಬ್ಬಬ್ಬಾ, ಒಂದೊಂದು ಮಾತುಗಳೂ ಕರ್ಣ ಕಠೋರ. ಇನ್ನೊಬ್ಬರು ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನೇ ಓಡಿಸಿ ಬಿಡುತ್ತಾರಂತೆ. ಎಂಥಾ ಪೌರುಷ, ಎಂಥಾ ಪರಾಕ್ರಮ.? ರಾಜಕೀಯ ಮೇಲಾಟದಲ್ಲಿ ಬಯಲಾಗಿದ್ದು ಹೇಗೆ ಮಾತಿನ ಮಹಾಶೂರರ ಅಸಲಿ ಬಂಡವಾಳ..

Add Asianetnews Kannada as a Preferred SourcegooglePreferred

ಈ ಬಾಯಿ ಬಡಾಯಿ ರಾಜಕಾರಣದ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಮಧ್ಯೆ ಪ್ರಾಸಿಕ್ಯೂಷನ್ ಯುದ್ಧ ಶುರುವಾಗಿದೆ.. ಮತ್ತೊಂದೆಡೆ ಸಿದ್ದರಾಮಯ್ಯ ಪರ ಜಮೀರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಏನೇನು ಮಾಡಿದ್ದೀರಿ, ಎಲ್ಲವನ್ನೂ ಬಿಚ್ಚಿಡಲಾ ಎಂದು ಮಾಜಿ ಸಿಎಂ ಕುಮಾರಣ್ಣನ ಮಾಜಿ ದೋಸ್ತ್ ಹೇಳಿದ್ದಾರೆ. ಇಷ್ಟೆಲ್ಲಾ ಬಾಯಿ ಬಡಾಯಿ, ಮಾತಿನ ಮಲ್ಲಯುದ್ಧಕ್ಕೆ ಕಾರಣ ಪ್ರಾಸಿಕ್ಯೂಷನ್ ಸಂಘರ್ಷ ವೇದಿಕೆ ಕಲ್ಪಿಸಿಕೊಟ್ಟಿದೆ. ಈ ಸಂಘರ್ಷಕ್ಕೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ.

Related Video