ನವೆಂಬರ್‌ನಲ್ಲಿ ಕರ್ನಾಟಕ ಸಿಎಂ ಬದಲಾವಣೆ, ಆರ್ ಅಶೋಕ್ ಬಾಂಬ್‌ನಿಂದ ಮತ್ತೆ ಕೋಲಾಹಲ
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಮಾತೇ ಅಂತಿಮ ಅನ್ನೋ ಸ್ಪಷ್ಟೀಕರಣ ಮಾತುಗಳು ಬಂದ ಬೆನ್ನಲ್ಲೇ ಇದೀಗ ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು(ಫೆ.01) ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಕುರಿತು ಸಾಕಷ್ಟು ವಾದ ವಿವಾದಗಳು ಆಗಿದೆ. ಸಿದ್ದರಾಮಯ್ಯ ಸ್ಥಾನವನ್ನು ಡಿಕೆ ಶಿವಕುಮಾರ್ ಆಕ್ರಮಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೆ. ಆದರೆ ಪ್ರತಿ ಬಾರಿ ಈ ವಿವಾದಕ್ಕೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಇದೀಗ ರಾಜ್ಯ ವಿಪಕ್ಷ ನಾಯಕ ಆರ್ ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಸಿಎಂ ಬದಲಾಗಲಿದ್ದಾರೆ ಎಂದಿದ್ದಾರೆ.