Asianet Suvarna News Asianet Suvarna News

ಬಿಜೆಪಿಗೆ ಯಾವಾಗ ಬಹುಮತ ಬಂದಿದೆ?: 'ಬ್ರಾಹ್ಮಣ ಸಿಎಂ' ಹೇಳಿಕೆಗೆ ಸಿದ್ದರಾಮಯ್ಯ ಏನಂದ್ರು?

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ 'ಬ್ರಾಹ್ಮಣ ಸಿಎಂ' ಹೇಳಿಕೆಯು ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಹೆಚ್‌.ಡಿ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
 

ಬಿಜೆಪಿ ಗೆದ್ದರೆ ಬ್ರಾಹ್ಮಣ ಸಿಎಂ ಹಾಗೂ 8 ಮಂದಿ ಡಿಸಿಎಂ ಎಂದು ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದು, ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಹೇಳಿದ ಎಲ್ಲವನ್ನು ನಾನು ಒಪ್ಪೋದಿಲ್ಲ, ಆರ್‌.ಎಸ್‌.ಎಸ್‌ ಅವರು ತೀರ್ಮಾನ ಮಾಡಿರಬಹುದು. ಆದರೆ ಬಿಜೆಪಿಯವರಿಗೆ ಯಾವಾಗ ಬಹುಮತ ಬಂದಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಬಿಜೆಪಿಗೆ ಬಹುಮತ ಬಂದ್ರೆ ತಾನೆ ನಿರ್ಧಾರ ಮಾಡುವುದು ಎಂದು ಹೇಳಿದರು.

ನಾವು ಮಾಡಿದ ಕೆಲಸವನ್ನೇ ನರೇಂದ್ರ ಮೋದಿ ಉದ್ಘಾಟಿಸ್ತಾರೆ: ಸಿದ್ದರಾಮಯ್ಯ ...