ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂಬಿ ಪಾಟೀಲ್ ಪದಗ್ರಹಣ!

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂಬಿ ಪಾಟೀಲ್ ಅಧಿಕಾರ ಸ್ವೀಕಾರ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮ

ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಒಂದು ತಿಂಗಳ ಬಳಿಕ ಅಧಿಕೃತವಾಗಿ ಜವಾಬ್ದಾರಿ

First Published Mar 28, 2022, 7:47 PM IST | Last Updated Mar 28, 2022, 7:46 PM IST

ಬೆಂಗಳೂರು (ಮಾ. 28): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ನ (Congress) ಹಿರಿಯ ನಾಯಕ ಎಂಬಿ ಪಾಟೀಲ್  (Senior Leader MB Patil)ಸೋಮವಾರ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡರು. ಪ್ರಚಾರ ಸಮಿತಿಯ ಅಧ್ಯಕ್ಷರಾಗಿ (campaign committee chairman ) ಆಯ್ಕೆಯಾದ ಒಂದು ತಿಂಗಳ ಬಳಿಕ ಎಂಬಿ ಪಾಟೀಲ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವ ಅಧಿಕಾರ ವಹಿಸಿಕೊಂಡರು.

ಭಾರತ್ ಮಾತಾ ಕಿ ಜೈ ಎನ್ನುತ್ತಲೇ ಭಾಷಣ ಆರಂಭಿಸಿದ ಎಂಬಿ ಪಾಟೀಲ್, ಬಿಜೆಪಿಯ (BJP) ಯಾರೊಬ್ಬರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಇಂಥ ಪಕ್ಷ ಈಗ ನಮಗೆ ರಾಷ್ಟ್ರೀಯತೆಯ ಪಾಠ ಮಾಡಲು ಬಂದಿದೆ. ಸರ್ವರಿಗೂ ಸಮಪಾಲು ಸಿದ್ಧಾಂತವನ್ನು ನಂಬಿರುವ ಕಾಂಗ್ರೆಸ್ ಪಕ್ಷ, ಈ ದೇಶ ಕಟ್ಟುವಲ್ಲಿ ನೀಡಿದ ಕೊಡುಗೆಯನ್ನು ಯಾರೊಬ್ಬರೂ ಮರೆಯುವಂತಿಲ್ಲ ಎಂದು ಹೇಳಿದರು.

ಬಳ್ಳಾರಿ ಮೇಯರ್ ಎಲೆಕ್ಷನ್, ಬಹುಮತ ಇದ್ರು ಕಾಂಗ್ರೆಸ್‌ನಲ್ಲಿ ಮೂಡದ ಒಮ್ಮತ, ಡಿಕೆಶಿ ಪಾಠ

ಇಂದು ಅಧಿಕಾರಕ್ಕೋಸ್ಕರ ಬಿಜೆಪಿ ಸಮಾಜದ ನಡುವೆ ಸಂಘರ್ಷ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಸಮಾಜವನ್ನು ಕಟ್ಟುವ ಕೆಲಸ ಮಾಡಲಿದೆ. ಜಾತಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯಲು ನಾವು ಬಿಡುವುದಿಲ್ಲ ಎಂದು ಎಂಬಿ ಪಾಟೀಲ್ ಹೇಳಿದರು. ಸಮಾರಂಭದಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.