ಬಳ್ಳಾರಿ ಮೇಯರ್ ಎಲೆಕ್ಷನ್, ಬಹುಮತ ಇದ್ರು ಕಾಂಗ್ರೆಸ್‌ನಲ್ಲಿ ಮೂಡದ ಒಮ್ಮತ, ಡಿಕೆಶಿ ಪಾಠ

* ಬಳ್ಳಾರಿ ಮೇಯರ್, ಉಪಮೇಯರ್ ಚುನಾವಣೆ
 * ಕಾಂಗ್ರೆಸ್ ಪಕ್ಷದಲ್ಲಿ ಬಹುಮತ ಇದ್ರು ಮೂಡದ ಒಮ್ಮತ..!
* ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾಠ

KPCC DK Shivakumar Entry In bellary for mayor and deputy mayor election rbj

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ನ್ಯೂಸ್, ಬಳ್ಳಾರಿ


ಬಳ್ಳಾರಿ, (ಮಾ.19): ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಡೆದು 10 ತಿಂಗಳ ನಂತರ ನಾಳೆ(ಶನಿವಾರ) ಮೇಯರ್ ಉಪಮೇಯರ್ ಚುನಾವಣೆ (Bellary  Mayor And Deputy Mayor Election) ನಡೆಯಲಿದೆ. ಆದ್ರೆ, ಕಾಂಗ್ರೆಸ್ ಪಕ್ಷದಲ್ಲಿ ಬಹುಮತ ಇದ್ರು ಒಮ್ಮತ ಮೂಡದಿರುವುದು ಪಕ್ಷದ ನಾಯಕರ ಆತಂಕಕ್ಕೆ‌ ಕಾರಣವಾಗಿದೆ..

ಮತ ಸದಸ್ಯರ ಸಂಖ್ಯೆ ಆಧರಿಸಿ ಕಾಂಗ್ರೆಸ್ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಅಲಂಕರಿಸುವುದು ಖಚಿತವಾಗಿದೆ‌. ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕೆ ರಾಜೇಶ್ವರಿ ಸುಬ್ಬರಾಯಡು ಹಾಗೂ ಪದ್ಮಜಾ ಮಧ್ಯೆ ಪೈಪೋಟಿ ಶುರುವಾಗಿದೆ. ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ಹಿರಿಯ ಸದಸ್ಯ ಪಿ ಗಾದೆಪ್ಪ ಹಾಗೂ ಮುಲ್ಲಂಗಿ ನಂದೀಶ್ ಹೆಸರು ಪ್ರಸ್ತಾಪವಾಗಿದ್ದರೂ ಗಾದೆಪ್ಪ ಉಪಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

Karnataka Congress: ಕಾಂಗ್ರೆಸ್‌ ಸದಸ್ಯತ್ವದಲ್ಲಿ ಹಿನ್ನಡೆ ಮೋಟಮ್ಮ, ಪುತ್ರಿಗೆ ಡಿಕೆಶಿ ಕ್ಲಾಸ್‌

ಬಹುಮತ ಇದ್ರೂ ಟೆನ್ಷನ್ ಟೆನ್ಷನ್
ಬಳ್ಳಾರಿ ಮಹಾನಗರ ಪಾಲಿಕೆಯ 39 ಸದಸ್ಯರ ಫೈಕಿ 21 ಸ್ಥಾನಗಳಲ್ಲಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ ಪಕ್ಷೇತರರಾಗಿ ಆಯ್ಕೆಯಾಗಿರುವ ಐವರು ಸದಸ್ಯರು ಸಹ ಚುನಾವಣೆ ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಪರಿಣಾಮ‌ ಸದಸ್ಯರ ಬಲ ಈಗ 26ಕ್ಕೆ ಎರಿದೆ. ಜೊತೆಗೆ ಶಾಸಕರೊಬ್ಬರು. ರಾಜ್ಯಸಭಾ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರೊಬ್ಬರ ಮತ ಬೆಂಬಲದಿಂದ ಕಾಂಗ್ರೆಸ್ ಪಕ್ಷಕ್ಕೆ 29 ಸದಸ್ಯರ ಮತಗಳು ಕಾಂಗ್ರೆಸ್ ಪಕ್ಷದಲ್ಲಿವೆ ಆದ್ರೂ ಆಪರೇಷನ್ ಕಮಲ ಭೀತಿ ಹಿನ್ನೆಲೆ ರೆಸಾರ್ಟ್ ಗೆ ಹೋಗಿದ್ರು..

ರೆಸಾರ್ಟ್ ಪ್ರವಾಸ ಅಂತ್ಯ
ಆಪರೇಷನ್ ಕಮಲಕ್ಕೆ ಹೆದರಿ  ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ರೆಸಾರ್ಟ್ ಸೇರಿದ್ದ ಸದಸ್ಯರು ಇಂದು ತಡರಾತ್ರಿ ಬಳ್ಳಾರಿ ತಲುಪಲಿದ್ದು ನಾಳೆ ಒಟ್ಟಾರೆ ಪಾಲಿಕೆಗೆ ಬರಲಿದ್ದಾರೆ. ಮತಸಂಖ್ಯೆ ಆಧರಿಸಿ ಕಾಂಗ್ರೆಸ್ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಅಲಂಕರಿಸುವುದು ಖಚಿತವಾಗಿದೆ‌. ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕೆ ರಾಜೇಶ್ವರಿ ಸುಬ್ಬರಾಯಡು ಹಾಗೂ ಪದ್ಮಜಾ ಮಧ್ಯೆ ಫೈಪೋಟಿ ಶುರುವಾಗಿದೆ. ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ಹಿರಿಯ ಸದಸ್ಯ ಪಿ ಗಾದೆಪ್ಪ ಹಾಗೂ ಮುಲ್ಲಂಗಿ ನಂದೀಶ್ ಹೆಸರು ಪ್ರಸ್ತಾಪವಾಗಿದೆ..

ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ತಮ್ಮ ಆಪ್ತರಿಗೆ ಮೇಯರ್ ಸ್ಥಾನ ಕಲ್ಪಿಸಲು ಮುಂದಾಗಿದ್ದು ಪಕ್ಷದ ನಾಯಕರು ಮೇಯರ್ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡುತ್ತಾರೆ ಅನ್ನೋದು ಕುತೊಹಲ ಮೂಡಿಸಿದೆ. ಈ ಮಧ್ಯೆ ಅಧಿಕಾರಕ್ಕಾಗಿ ಪರದಾಡುತ್ತಿರುವ ಬಿಜೆಪಿ ನಾಯಕರು ಕೊನೆ ಕ್ಷಣದವರೆಗೂ ಕಾಯ್ದು ನೋಡುವ ತಂತ್ರಕ್ಕೆ ಮುಂದಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಣ, ಅಧಿಕಾರ ಮತ್ತು ವಾಹನದ ಆಸೆ ತೋರಿಸಿರುವುದು ಕಾಂಗ್ರೆಸ್ ಮುಖಂಡರಲ್ಲಿ ತೀವ್ರ ಆತಂಕ ಮೂಡಿಸಿದೆ.

ಬೆಂಗಳೂರಿನಲ್ಲಿ ಡಿಕೆಶಿ ಒಗ್ಗಟ್ಟಿನ ಮಂತ್ರ
ಕೆಪಿಸಿಸಿ ಡಿ.ಕೆ. ಶಿವಕುಮಾರ್ ಪಕ್ಷ ನಿಷ್ಠೆ ಮತ್ತು ವಾರ್ಡ್ ಮತ್ತು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಆದ್ಯತೆ ನೀಡಬೇಕು. ಈ ಹಿನ್ನಲೆಯಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ಮೇಯರ್ ಮತ್ತು ಉಪ ಮೇಯರ್ ಹುದ್ದೆಯ ಆಕಾಂಕ್ಷಿಗಳು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂದು ಒಗ್ಗಟ್ಟಿನ ಮಂತ್ರವನ್ನು ಬೋಧಿಸಿದ್ದಾರೆ.

ಮೇಯರ್ ಉಪಮೇಯರ್ ಚುನಾವಣೆ ದಿನಾಂಕ‌ ಘೋಷಣೆಯಾದ ನಂತರ ಬೆಂಗಳೂರಿನ ಖಾಸಗಿ ರೆರ್ಸಾಟ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಸದಸ್ಯರಿಂದ ವೀಕ್ಷಕರು ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ. ಮಾಜಿ ಸಚಿವ ಯು ಟಿ ಖಾದರ್. ಮಾಜಿ ಸಂಸದ ಚಂದ್ರಪ್ಪ ಹಾಗೂ ಆರ್ ಮಂಜುನಾಥ್, ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದ್ದು. ನಾಳೆ ಮುಂಜಾನೆ ಕಾಂಗ್ರೆಸ್ ನ ಎಲ್ಲ ಸದಸ್ಯರು ನೇರವಾಗಿ ಚುನಾವಣೆ ಪ್ರಕ್ರೀಯೆಯಲ್ಲಿ ಭಾಗಿಯಾಗಲಿದ್ದಾರೆ. 

Latest Videos
Follow Us:
Download App:
  • android
  • ios