ಕಾಂಗ್ರೆಸ್ ಕದ ತಟ್ಟುತ್ತಿದ್ದಾರಾ ಬಿಜೆಪಿ ಬಾಂಬೆ ಫ್ರೆಂಡ್ಸ್..?

- ಕಾಂಗ್ರೆಸ್‌ ಪಕ್ಷ ಸಿದ್ಧಾಂತ, ನಾಯಕತ್ವ ಒಪ್ಪಿ ಕೆಲಸ ಮಾಡಲು ಇಚ್ಛಿಸುವವರು ಪಕ್ಷ ಸೇರಲು ಅರ್ಜಿ ಹಾಕಬಹುದು - ಕೇವಲ 17 ಮಂದಿ ಶಾಸಕರನ್ನು ಮಾತ್ರ ಉದ್ದೇಶಿಸಿ ಹೇಳಿಲ್ಲ. - ಯಾರೇ ಅರ್ಜಿ ಸಲ್ಲಿಸಿದರೂ ಪಕ್ಷ ಅದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ: ಡಿಕೆಶಿ

Share this Video
  • FB
  • Linkdin
  • Whatsapp

ಬೆಂಗಳೂರು (ಜು. 04): ಕಾಂಗ್ರೆಸ್‌ ಪಕ್ಷ ಸಿದ್ಧಾಂತ, ನಾಯಕತ್ವ ಒಪ್ಪಿ ಕೆಲಸ ಮಾಡಲು ಇಚ್ಛಿಸುವ ಯಾರೇ ಆದರೂ ಪಕ್ಷ ಸೇರಲು ಅರ್ಜಿ ಹಾಕಬಹುದು ಎಂದು ಹೇಳಿದ್ದೇನೆ. ಕೇವಲ 17 ಮಂದಿ ಶಾಸಕರನ್ನು ಮಾತ್ರ ಉದ್ದೇಶಿಸಿ ಹೇಳಿಲ್ಲ. ಯಾರೇ ಅರ್ಜಿ ಸಲ್ಲಿಸಿದರೂ ಪಕ್ಷ ಅದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಸೇರಿದ 14 ಶಾಸಕರು ಮರಳಿ ಕಾಂಗ್ರೆಸ್‌ಗೆ? ಡಿಕೆಶಿ ಹೇಳಿಕೆಗೆ ಸಿದ್ದರಾಮಯ್ಯ ಉಲ್ಟಾ ಹೇಳಿಕೆ

ನಾನು 17 ಮಂದಿ ಶಾಸಕರು ಅರ್ಜಿ ಹಾಕಲಿ ಎಂದು ಹೇಳಿಲ್ಲ. ಅವರು ಯಾರೂ ನನ್ನನ್ನು ಸಂಪರ್ಕಿಸಿಯೂ ಇಲ್ಲ. 17 ಮಂದಿ ಹೊರತುಪಡಿಸಿ ಬೇರೆಯವರು ಸಂಪರ್ಕಿಸಿದ್ದಾರೆ. ಹೀಗಾಗಿ ಯಾರೇ ಪಕ್ಷಕ್ಕೆ ಬರಲು ಆಸಕ್ತಿ ಇದ್ದರೂ ಅರ್ಜಿ ಸಲ್ಲಿಸಬಹುದು. ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿಯು ಈ ಬಗ್ಗೆ ಪರಿಶೀಲನೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.

Related Video