ಬೊಮ್ಮಾಯಿ ಸರ್ಕಾರದ ಮೀಸಲಾತಿ ಮಾಸ್ಟರ್ ಸ್ಟ್ರೋಕ್.. ಪತರಗುಟ್ಟಿತಾ ಹಸ್ತ ಪಡೆ ?

ಎಲೆಕ್ಷನ್ ಹೊತ್ತಲ್ಲಿ ಪ್ರಯೋಗಿಸಿರುವ ಮೀಸಲಾತಿ ಅಸ್ತ್ರ ಯಾರಿಗೆ ಲಾಭ ತರಲಿದೆ..? ಯಾರಿಗೆ ಹೇಗೆ ನಷ್ಟವಾಗಲಿದೆ? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ 

First Published Mar 26, 2023, 3:30 PM IST | Last Updated Mar 26, 2023, 3:30 PM IST

ಬಸವರಾಜ ಬೊಮ್ಮಾಯಿ ಸರ್ಕಾರದ ಮೀಸಲಾತಿ ಎನ್ನುವ  ಮಾಸ್ಟರ್ ಸ್ಟ್ರೋಕ್ ಗೆ ಹಸ್ತ ಪಡೆ ಪತರಗುಟ್ಟಿದ್ಯಾ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಇನ್ನು .2ಬಿಯಲ್ಲಿದ್ದ ಮುಸ್ಲಿಮರ ಮೀಸಲಾತಿ ತೆಗೆದು,  ಒಕ್ಕಲಿಗರಿಗೆ ಹಾಗೂ ಲಿಂಗಾಯತರಿಗೆ ಅದನ್ನ ಹಂಚಿಕೆ ಮಾಡಿದೆ ರಾಜ್ಯ ಸಚಿವ ಸಂಪುಟ. 2 ಬಿ ಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲಾಗಿದ್ದು,  2 ಬಿಯಲ್ಲಿದ್ದ ಮುಸ್ಲಿಮರನ್ನು ಆರ್ಥಿಕ ಹಿಂದುಳಿದ ವರ್ಗಗಳ ಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಸರ್ಕಾರದ ಈ ನಡೆಗೆ ಮುಸ್ಲಿಮರಿಮದ ವಿರೋಧ ವ್ಯಕ್ತವಾಗಿದೆ. ಸಂವಿಧಾನ ವಿರೋಧಿ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕರ್ನಾಟಕದ ನಾನಾ ಮುಸ್ಲಿಂ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ. ಅದೆಲ್ಲಕ್ಕಿಂತಾ ಮುಖ್ಯವಾಗಿ, ಎಲೆಕ್ಷನ್ ಹೊತ್ತಲ್ಲೇ ಪ್ರಯೋಗಿಸಿರೋ ಈ ಮೀಸಲಾತಿ ಅಸ್ತ್ರ ಯಾರಿಗೆ ಲಾಭ ತರಲಿದೆ..? ಯಾರಿಗೆ ಹೇಗೆ ನಷ್ಟವಾಗಲಿದೆ? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ .