News Hour: ಕರುನಾಡಿಗೆ ಕಾವೇರಿ ಸಂಕಟ, ಸರ್ಕಾರಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಕಂಟಕ!


ಇಡೀ ಕರುನಾಡಿಗೆ ಕಾವೇರಿ ಸಂಕಟ ಎದುರಾಗಿದ್ದರೆ, ಸರ್ಕಾರ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ವಿಚಾರದಲ್ಲಿ ಆಗಬಹುದಾದ ಕಂಟಕದ ಬಗ್ಗೆ ಯೋಚನೆ ಮಾಡುತ್ತಿದೆ. ಕಾವೇರಿ ವಿಚಾರವಾಗಿ ಇದು ರಾಜ್ಯದ 10 ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.22): ಕಾವೇರಿ ನದಿ ನೀರು ವಿಚಾರವಾಗಿ ಕಾವೇರಿ ಕೊಳ್ಳದಲ್ಲಿ ಜಿಲ್ಲೆಗಳಲ್ಲಿ ಜಲಯುದ್ಧ ರೋಷಾಗ್ನಿ ಆರಂಭವಾಗಿದೆ. ಕಾವೇರಿ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀ ಧುಮುಕಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದರು. ರೈತ ಹಿತರಕ್ಷಣಾ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ನೀಡಿದ್ದಾರೆ. ಇದೇ ವೇಳೆ ರೈತ ಹೋರಾಟಕ್ಕೆ ನಟ ಅಭಿಷೇಕ್ ಅಂಬರೀಶ್ ಸಾಥ್ ನೀಡಿದ್ದಾರೆ.

ಕಾವೇರಿ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ರೈತರು ಬೇಡಿಕೆ ಇಟ್ಟಿದ್ದಾರೆ. ಸರ್ಕಾರದ ವಿರುದ್ಧ ಮಂಡ್ಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆ ಮಂಡ್ಯಸಿಟಿ ಬಂದ್‌ಗೆ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದೆ. ‘ತಮಿಳುನಾಡಿಗೆ ಪ್ರತಿವರ್ಷ 419 ಟಿಎಂಸಿ ಕಾವೇರಿ ನೀರು. ಕರ್ನಾಟಕಕ್ಕೆ ಪ್ರತಿವರ್ಷ 270TMC ನಿಗದಿ ಮಾಡಲಾಗಿದೆ. ‌ಮಳೆ ಕಡಿಮೆ ಸಂಧರ್ಭದಲ್ಲಿ ಸಂಕಷ್ಟ ಸೂತ್ರ ರಚಿಸಬೇಕಿತ್ತು.ಮಳೆ ಕಡಿಮೆಯಾಗಿ ಈ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಬೆಳೆ‌ ಒಣಗುವುದು ಒಂದೆಡೆ ಆದರೆ ಮನುಷ್ಯನೇ ಒಣಗಿ ಹೋಗ್ತಾನೆ' ಎಂದು ನಿರ್ಮಲಾನಂದ ಶ್ರೀ ಹೇಳಿದ್ದಾರೆ.

ವರನಟ ರಾಜ್‌ಕುಮಾರ್‌ ಬಳಿಕ ಕಾವೇರಿ ಹೋರಾಟಕ್ಕಿಳಿದ ದೊಡ್ಡಮನೆ ಕುಡಿ: ಪ್ರಾಣಾನೇ ಮುಡಿಪಾಗಿಡೋದಾಗಿ ಪ್ರಮಾಣ

ಇನ್ನೊಂದೆಡೆ ರಾಜ್ಯ ಸರ್ಕಾರಕ್ಕೆ ರಾಜಕೀಯ ವಿಚಾರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ತಲೆನೋವಾಗಿದೆ. ಕೇಂದ್ರ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಜಿಡಿಎಸ್ ನಾಯಕರು ಮೈತ್ರಿಯನ್ನು ಪಕ್ಕಾ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಸೀಟು ಹಂಚಿಕೆ ಚರ್ಚೆ ಆರಂಭವಾಗಬೇಕಿದೆ.

Related Video