ರಾಜಕೀಯ ನಿವೃತ್ತಿ ಘೋಷಿಸಿದ್ರಾ ಬಿಎಸ್ ಯಡಿಯೂರಪ್ಪ, ಬಿಜೆಪಿಯಲ್ಲಿ ತಳಮಳ!

ಶಿಕಾರಿಪುರ ಕ್ಷೇತ್ರ ತ್ಯಜಿಸಿದ ಬಿಎಸ್ ಯಡಿಯೂರಪ್ಪ ಕರ್ನಾಟಕ ರಾಜಕೀಯದಲ್ಲಿ ಹೊಸ ಸಂದೇಶ ರವಾನಿಸಿದ್ದಾರೆ. ತಮ್ಮ ಪುತ್ರನಿಗೆ ಶಿಕಾರಿಪುರ ಕ್ಷೇತ್ರ ನೀಡಿ ಬಿಎಸ್‌ವೈ ನಿರ್ಧಾರದ ಹಿಂದಿನ ಕಾರಣವೇನು?

First Published Jul 22, 2022, 11:18 PM IST | Last Updated Jul 22, 2022, 11:18 PM IST

ಚುನಾವಣಾ ರಾಜಕೀಯದಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಿಂದೆ ಸರಿಯುವ ಮಾತನಾಡಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ, ಪುತ್ರ ವಿಜಯೇಂದ್ರ ಸ್ಪರ್ಧಿಸುತ್ತಾನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿಕೆ ಬಾರಿ ಸಂಚಲನ ಸೃಷ್ಟಿಸಿದೆ. ಹೆಚ್ಚಿನ ಅಂತರದಿಂದ ವಿಜಯೇಂದ್ರ ಗೆಲ್ಲಿಸಿ ಎಂದು ಯಡಿಯೂರಪ್ಪ ಮತದಾರರನ್ನು ಮನವಿ ಮಾಡಿದ್ದಾರೆ.ಶಿಕಾರಿಪುರ ಕ್ಷೇತ್ರ ಪುತ್ರನಿಗೆ ಬಿಟ್ಟುಕೊಟ್ಟ ಘೋಷಣೆ ಬೆನ್ನಲ್ಲೇ ಹಲವು ನಾಯಕರು ಪ್ರತಿಕ್ರಿಯೆಸಿದ್ದಾರೆ. ಬಿಎಸ್‌ವೈ ಘೋಷಣೆ ಕುರಿತು ಮಾಜಿ ಸಿಎಂ ಕುಮರಾಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಏಕಾಏಕಿ ಶಿಕಾರಿಪುರ ಕ್ಷೇತ್ರ ಪುತ್ರನಿಗೆ ಬಿಟ್ಟುಕೊಡುವ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸಿದೆ. ಇದರ ಹಿಂದಿನ ಕಾರಣವೇನು? ಹೈಕಮಾಂಡ್ ಸೂಚನೆಯಂತೆ ಯಡಿಯೂರಪ್ಪ ನಿವೃತ್ತಿ ಘೋಷಿಸಿದ್ರಾ? ಈ ಕುರಿತ ರಾಜಕೀಯ ಒಳಸುಳಿ ಏನು? ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ