ಮಾ. 15 ಕ್ಕೆ ಪರಿಷತ್ ಚುನಾವಣೆ; ವಿಶ್ವನಾಥ್‌ಗೆ ಸಿಗುತ್ತಾ ಟಿಕೆಟ್..?

ಜೆಡಿಎಸ್‌ನ ಧರ್ಮೇಗೌಡ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಮಾರ್ಚ್ 15 ರಂದು ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗೆ ಗೆಲುವು ಸುಲಭ ಎನ್ನಲಾಗುತ್ತಿದೆ. ಈ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ. 

First Published Feb 19, 2021, 2:02 PM IST | Last Updated Feb 19, 2021, 2:08 PM IST

ಬೆಂಗಳೂರು (ಫೆ. 19): ಜೆಡಿಎಸ್‌ನ ಧರ್ಮೇಗೌಡ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಮಾರ್ಚ್ 15 ರಂದು ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗೆ ಗೆಲುವು ಸುಲಭ ಎನ್ನಲಾಗುತ್ತಿದೆ. ಈ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ.

ಪರಿಷತ್‌ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ದೊಡ್ಡ ಲಾಬಿ, ಯಾರ್ಯಾರಿದ್ದಾರೆ ರೇಸ್‌ನಲ್ಲಿ.?

ಒಂದು ಕಡೆ ಎಚ್‌. ವಿಶ್ವನಾಥ್ ಲಾಬಿ ನಡೆಸುತ್ತಿದ್ದರೆ, ಇನ್ನೊಂದು ಕಡೆ ಪರಿಷತ್‌ನ ಮಾಜಿ ಸದಸಯ ಮೋಹನ್ ಲಿಂಬಿಕಾಯಿ, ತುಳಸಿ ಮುನಿರಾಜು ಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್, ದೆಹಲಿ ಪ್ರತಿನಿಧಿ ಶಂಕರ್‌ಗೌಡ ಪಾಟೀಲ್ ಕೊನೆ ಪ್ರಯತ್ನ ನಡೆಸುತ್ತಿದ್ದಾರೆ.