Asianet Suvarna News Asianet Suvarna News

MLC ಚುನಾವಣೆ: ಅಭ್ಯರ್ಥಿಗಳ ಆಯ್ಕೆ, ಅಹಿಂದ ಮಂತ್ರ ಜಪಿಸಿದ 3 ಪಕ್ಷಗಳು

ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಸರ್ಕಾರ ಭರ್ಜರಿಯಾಗಿ ನಡೆದಿತ್ತು. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದರಿಂದ ಹೈಕಮಾಂಡ್ ಯಾರನ್ನ ಆಯ್ಕೆ ಮಾಡಬೇಕು? ಯಾರನ್ನ ಬಿಡಬೇಕೆಂಬ ಇಕ್ಕಟ್ಟಿನಲ್ಲಿತ್ತು. ಅಂತಿಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಅಚ್ಚರಿ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿವೆ. ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಮೂರು ಪಕ್ಷಗಳು ಅಹಿಂದ ಮಂತ್ರ ಜಪಿಸಿರುವುದು ವಿಶೇಷ.

ಬೆಂಗಳೂರು, (ಮೇ.24):  ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಅಚ್ಚರಿ ಅಂದ್ರೆ ಈ ಮೂರು ಪಕ್ಷಗಳು ನಾಮಪತ್ರ ಸಲ್ಲಿಕೆ ಅವಧಿ ಅಂತ್ಯಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿವೆ.

ಪರಿಷತ್ ಟಿಕೆಟ್ ಗಿಟ್ಟಿಸಿಕೊಂಡ ಗಟ್ಟಿಗಿತ್ತಿ ಹೇಮಲತಾ ನಾಯಕ ಯಾರು? ಹೈಕಮಾಂಡ್ ಗುರುತಿಸಿದ್ದೇಗೆ?

ಅದರಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಸರ್ಕಾರ ಭರ್ಜರಿಯಾಗಿ ನಡೆದಿತ್ತು. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದರಿಂದ ಹೈಕಮಾಂಡ್ ಯಾರನ್ನ ಆಯ್ಕೆ ಮಾಡಬೇಕು? ಯಾರನ್ನ ಬಿಡಬೇಕೆಂಬ ಇಕ್ಕಟ್ಟಿನಲ್ಲಿತ್ತು. ಅಂತಿಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಅಚ್ಚರಿ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿವೆ. ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಮೂರು ಪಕ್ಷಗಳು ಅಹಿಂದ ಮಂತ್ರ ಜಪಿಸಿರುವುದು ವಿಶೇಷ.