Karnataka Cabinet Expansion : ರಾಜಕೀಯ ಕ್ರಾಂತಿ - ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಐವರು
ರಾಜ್ಯ ರಾಜಕಾರಣದ ಬಿಗ್ ನ್ಯೂಸ್ ಇದು. ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿ ನಂತರ ರಾಜಕೀಯ ಕ್ರಾಂತಿ ಆಗಲಿದೆ ಎನ್ನಲಾಗುತ್ತಿದೆ. ಹೊಸ ವರ್ಷದ ಹೊಸ್ತಿಲಲ್ಲೇ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಮೇಜರ್ ಆಗಲಿದೆ ಎನ್ನಲಾಗುತ್ತಿದೆ. ಜನವರಿ ಅಂತ್ಯದ ಒಳಗೆ ಸಂಪುಟ ವಿಸ್ತರಣೆ ಆಗಲಿದ್ದು ಹಿರಿಯರಾಗಿರುವ ಐವರು ಮಂತ್ರಿಗಿರಿ ಕಳೆದುಕೊಳ್ಳಲಿದ್ದಾರೆ. ಐವರು ಸಚಿವರಿಗೆ ಬೊಮ್ಮಾಯಿ ಸಂಪುಟದಿಂದ ಕೊಕ್ ನೀಡಲಾಗುತ್ತಿದೆ. ಐವರಿಗೆ ಕೋಕ್ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರು (ಡಿ.23): ರಾಜ್ಯ ರಾಜಕಾರಣದ (Politics) ಬಿಗ್ ನ್ಯೂಸ್ ಇದು. ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿ ನಂತರ ರಾಜಕೀಯ ಕ್ರಾಂತಿ ಆಗಲಿದೆ ಎನ್ನಲಾಗುತ್ತಿದೆ. ಹೊಸ ವರ್ಷದ ಹೊಸ್ತಿಲಲ್ಲೇ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಂಪುಟಕ್ಕೆ ಮೇಜರ್ ಆಗಲಿದೆ ಎನ್ನಲಾಗುತ್ತಿದೆ. ಜನವರಿ ಅಂತ್ಯದ ಒಳಗೆ ಸಂಪುಟ ವಿಸ್ತರಣೆ ಆಗಲಿದ್ದು ಹಿರಿಯರಾಗಿರುವ ಐವರು ಮಂತ್ರಿಗಿರಿ ಕಳೆದುಕೊಳ್ಳಲಿದ್ದಾರೆ. ಐವರು ಸಚಿವರಿಗೆ ಬೊಮ್ಮಾಯಿ ಸಂಪುಟದಿಂದ (Cabinet) ಕೊಕ್ ನೀಡಲಾಗುತ್ತಿದೆ. ಐವರಿಗೆ ಕೋಕ್ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
Karnataka Politics : ಹೊಸ ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ -ಸಿಎಂ ಬದಲು
ಇದರಲ್ಲಿ ಕೆಲವರಿಗೆ ಹಿರಿತನ ಶಾಪ ಅದರೆ ಇನ್ನೂ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳಲು ಕಾರಣ ಆಗಿರುವುದು ಗುಂಪುಗಾರಿಕೆ. ಈ ನಿಟ್ಟಿನಲ್ಲಿ ಕೈ ಬಿಡಲಾಗುವ ಐವರ ಸ್ಥಾನಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎನ್ನುವ ಚರ್ಚೆ ಈಗಾಗಲೇ ರಾಜ್ಯ ರಾಜಕೀಯದಲ್ಲಿ ಆರಂಭವಾಗಿದೆ. ಯಾವ ಹೊಸಬರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಈ ತಿಂಗಳ ಅಂತ್ಯದ ವೇಳೆಗೆ ನಿರ್ಧಾರ ಆಗಲಿದ್ದು, ಸಚಿವರ ಹೆಸರು ಫೈನಲ್ ಆಗುತ್ತಿದ್ದಂತೆ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಾಗುತ್ತದೆ.