Border Issue: ನಾಳೆ ಬೆಳಗಾವಿಗೆ ಮಹಾ ಸಚಿವರು ಆಗಮನ: ಕನ್ನಡ ಸಂಘಟನೆಗಳಿಂದ ವಿರೋಧ

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದ ನಡುವೆ ಮಹಾ ಸಚಿವರು ಬೆಳಗಾವಿಗೆ ಭೇಟಿ ನೀಡಲಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
 

Share this Video
  • FB
  • Linkdin
  • Whatsapp

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ದಶಕಗಳ ಗಡಿ ವಿವಾದ ತಾರಕಕ್ಕೆ ಏರಿದ್ದು, ಬೆಳಗಾವಿ ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಇಂತಹ ವೇಳೆ ಮಹಾರಾಷ್ಟ್ರದ ಸಚಿವರು ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಇದಕ್ಕೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮಹಾರಾಷ್ಟ್ರ ಸಚಿವರ ನಡೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ಸಂಘಟನೆಗೆಳು ಪ್ರತಿಭಟನೆ ನಡೆಸಿ, ಉರುಳು ಸೇವೆ ಮಾಡಿದ್ದಾರೆ. ಯಾರಪ್ಪಂದ್‌ ಏನೈತಿ, ಬೆಳಗಾವಿ ನಮ್ದೈತಿ ಎಂದು ಎಂಇಎಸ್‌ ಹಾಗೂ ಮಹಾರಾಷ್ಟ್ರ ಸಚಿವರ ವಿರುದ್ಧ ಘೋಷಣೆ ಕೂಗಿದ್ದಾರೆ.

Related Video