ಯಾವ ರಾಜ್ಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಇದೆ? ಹಿಂದುಳಿದ ವರ್ಗದ ಕತೆಏನು?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ನಿರ್ಧಾರ, ಭಾರತ್ ಜೋಡೋ ಯಾತ್ರೆಯಲ್ಲಿ ಗೌಡನಾದ ರಾಹುಲ್ ಗಾಂಧಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ವಿಚಾರಣೆ ಸೇರಿದಂತೆ ಇಂದಿನ ಇಡೀ ದಿನದ ಸಂಪೂರ್ಣ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ನೀಡಿದ್ದ ಮೀಸಲಾತಿಯನ್ನು ಹೆಚ್ಚಿಸಿ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನಿರ್ಧಾರ ಪ್ರಕಟಿಸಿದರು. ದೇಶದ ಹಲವು ರಾಜ್ಯಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಇದೆ. ಇದೀಗ ಕರ್ನಾಟಕ ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಳದಿಂದ ಒಟ್ಟು ಮೀಸಲಾತಿ ಶೇಕಡಾ 50ಕ್ಕಿಂತ ಹೆಚ್ಚಾಗುತ್ತಾ? 2ಎ, 2ಬಿ, 3ಎ, 3ಬಿ ಸೇರಿದಂತೆ ಹಲವು ಒಳಮೀಸಲಾತಿಗಳು ದೇಶದಲ್ಲಿದೆ. ಈ ಒಳಮೀಸಲಾತಿಗ ಪ್ರಮಾಣ ಎಷ್ಟಿದೆ? ಈ ಕೆಟಗರಿಯಲ್ಲಿ ಬರುವ ಸಮುದಾಯಗಳ ಮೀಸಲಾತಿಗೆ ಅಸಮಧಾನ ಯಾಕೆ? ಇಲ್ಲಿದೆ ವಿವರ.