'ಟಿಕೆಟ್‌ ಕೈ ತಪ್ಪೋದಕ್ಕೆ ಸಿದ್ದರಾಮಯ್ಯ ಕಾರಣ!' 'ಬಿಜೆಪಿಗೆ ಹೈಕಮಾಂಡ್ ನಾನೇನಾ?'

  • ನನಗೆ ಟಿಕೆಟ್ ತಪ್ಪಿಸುವಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪಾತ್ರ ಇದೆ! ವಿಶ್ವನಾಥ್ ಆರೋಪ
  • ಎಂಟಿಬಿಗೊಂದು ನ್ಯಾಯ ನನಗೊಂದು ನ್ಯಾಯ ಯಾಕೆ? ಅವರು ಸೋತಿಲ್ಲವೇ? ಹಳ್ಳಿ ಹಕ್ಕಿ ಪ್ರಶ್ನೆ
  • ಬಿಜೆಪಿಗೂ ಹೈಕಮಾಂಡ್ ನಾನೇನಾ? ವಿಶ್ವನಾಥ್ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 18): ವಿಧಾನ ಪರಿಷತ್ತು ಟಿಕೆಟ್ ಕೈತಪ್ಪಿರುವುದರ ಹಿಂದೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪಾತ್ರ ಇದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ. ಟಿಕೆಟ್ ಸಿಕ್ಕಿಲ್ಲ ಅಂತ ಬೇಸರ ಆಗಿಲ್ಲ, ರಾಜ್ಯದಿಂದ ನನ್ನ ಹೆಸರು ಶಿಫಾರಸು ಮಾಡಲಾಗಿತ್ತು, ದೆಹಲಿಯಲ್ಲಿ ಬದಲಾವಣೆ ಆಗಿದೆ. ಯಡಿಯೂರಪ್ಪ ಅವರ ಮೇಲೆ ಇನ್ನೂ ನನಗೆ ನಂಬಿಕೆ ಇದೆ. ಎಂಟಿಬಿಗೊಂದು ನ್ಯಾಯ ನನಗೊಂದು ನ್ಯಾಯ ಯಾಕೆ? ಅವರು ಸೋತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ನೋಡಿ | ಆರ್. ಶಂಕರ್ ಓಕೆ, ವಿಶ್ವನಾಥ್ ಬೇಡ ಯಾಕೆ? ಇಲ್ಲಿದೆ ಟಿಕೆಟ್ ನಿರಾಕರಣೆ ಹಿಂದಿನ ರಹಸ್ಯ!...

ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಗೂ ಹೈಕಮಾಂಡ್ ನಾನೇನಾ? ಎಂದು ವ್ಯಂಗವಾಡಿದ್ದಾರೆ.

Related Video