Asianet Suvarna News Asianet Suvarna News

ಕೆಪಿಸಿಸಿ ಪದಗ್ರಹಣ: ಕನಕಪುರ ರಣಕಲಿ ಶಿಕಾರಿವೀರನ ಮನ ಗೆದ್ದದ್ದು ಹೇಗೆ?

ಕನಕಪುರ ಬಂಡೆ ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆತಿದ್ದರೂ ಪಟ್ಟಾಭಿಷೇಕ ಸಮಯಕ್ಕಾಗಿ ಕಾಯುತ್ತಿದ್ದರು. ಕಳೆದ 92 ದಿನಗಳಿಂದ ಕಾಯುತ್ತಿದ್ದ ಆ ಸಮಯ ಕೊನೆಗೂ ಬಂದು ಬಿಟ್ಟಿದೆ. ಕೊನೆಗೂ ರಾಜ್ಯ ಸರ್ಕಾರ ಡಿಕೆಶಿ ಪದಗ್ರಹಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. 
 

ಬೆಂಗಳೂರು (ಜೂ. 12): ಕನಕಪುರ ಬಂಡೆ ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆತಿದ್ದರೂ ಪಟ್ಟಾಭಿಷೇಕ ಸಮಯಕ್ಕಾಗಿ ಕಾಯುತ್ತಿದ್ದರು. ಕಳೆದ 92 ದಿನಗಳಿಂದ ಕಾಯುತ್ತಿದ್ದ ಆ ಸಮಯ ಕೊನೆಗೂ ಬಂದು ಬಿಟ್ಟಿದೆ. ಕೊನೆಗೂ ರಾಜ್ಯ ಸರ್ಕಾರ ಡಿಕೆಶಿ ಪದಗ್ರಹಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. 

ಇದ್ದಕ್ಕಿದ್ದಂತೆ ಯಡಿಯೂರಪ್ಪ ಫೋನ್ ಕಾಲ್: ಥ್ಯಾಂಕ್ಸ್ ಹೇಳಿದ ಡಿಕೆ ಶಿವಕುಮಾರ್

ಪದಗ್ರಹಣಕ್ಕೆ 3 ಬಾರಿ ದಿನ ನಿಗದಿಪಡಿಸಿದ್ದರೂ ಮುಹೂರ್ತ ಕೂಡಿ ಬಂದಿರಲಿಲ್ಲ.  ಕೊನೆಗೆ ಜೂನ್ 14 ಕ್ಕೆ ಮುಹೂರ್ತ ನಿಗದಿಪಡಿಸಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವಾಗ ಬಿಎಸ್‌ವೈ ಸರ್ಕಾರ ಕೊನೆ ಕ್ಷಣದಲ್ಲಿ ಡಿಕೆಶಿ ಸಂಭ್ರಮಕ್ಕೆ ಬ್ರೇಕ್ ಹಾಕಿತ್ತು. ಪಟ್ಟಾಭಿಷೇಕಕ್ಕೆ ಅನುಮತಿ ಕೊಡಲು ಸಾಧ್ಯವೇ ಇಲ್ಲ ಎಂದು ಬಿಟ್ಟರು. ಇದರಿಂದ ಕನಕಪುರ ಬಂಡೆ ಕೆಂಡಾಮಂಡಲರಾದರು. ಕೂಡಲೇ ಪ್ರೆಸ್ ಮೀಟ್ ಮಾಡಿ ಬಿಎಸ್‌ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ರಾಜಕೀಯ ಸನ್ನಿವೇಶ ಬದಲಾಗಿ ಕೊನೆಗೂ ಪದಗ್ರಹಣಕ್ಕೆ ಅನುಮತಿ ಸಿಕ್ಕಿದೆ. ಹಾಗಾದರೆ ಡಿಕೆಶಿ ಮಾಡಿದ ಗೂಗ್ಲಿಯಾದರೂ ಏನು? ಶಿಕಾರಿವೀರನನ್ನು ಕನಕಪುರ ಬಂಡೆ ಗೆದ್ದಿದ್ದು ಹೇಗೆ? ಇಲ್ಲಿದೆ ನೋಡಿ..! 

Video Top Stories