ರಂಗೇರಿದೆ ಅಥಣಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾವು..ಈ ಬಾರಿ ಯಾರಾಗ್ತಾರೆ ಅಥಣಿ ಕ್ಷೇತ್ರದ ಅರಸ..?

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ ಅಥಣಿ  ಕ್ಷೇತ್ರದ ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
 

First Published May 3, 2023, 12:21 PM IST | Last Updated May 3, 2023, 12:21 PM IST

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಬೆಳಗಾವಿಯ ಅಥಣಿ   ಕ್ಷೇತ್ರದ  ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.  ರಾಜಕಾರಣಿಗಳು ಬಿಝಿಯಾಗಿದ್ದಾರೆ. ಇನ್ನೊಂದು ಕಡೆ ಮತದಾರರು ಕೂಡಾ ಎಲ್ಲವನ್ನು ಕೂತು ಗಮನಿಸುತ್ತಿದ್ದು, ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸವದಿ ಗೆಲ್ಲುತ್ತಾರೆ ಎಂದು ಹೆಚ್ಚು ಮತದಾರು ಹೇಳಿದ್ದಾರೆ. ಅಥಣಿಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಿದ್ದು ಮತದಾರರ ಒಲವು ಲಕ್ಷ್ಮಣ್‌ ಸವದಿ ಕಡೆ ಇದೆ. ಮಹೇಶ್‌ ಕುಮಟಳ್ಳಿ ತುಂಬಾ ಕೆಲಸವನ್ನು ಮಾಡಿದ್ದಾರೆ ಆದರೆ ತುಂಬಾ ಜನಕ್ಕೆ ಇದು ಗೋತ್ತಿಲ್ಲ, ಸವದಿ ತುಂಬಾ ಹಳೆಯ ವ್ಯಕ್ತಿ ತುಂಬಾ ಜನರಿಗೆ ಪರಿಚಯವಿರುವುದರಿಂದ ತುಂಬಾ ಮಂದಿ ಅವರಿಗೆ ಮತಹಾಕುತ್ತಾರೆ ಎಂದು ಹೇಳಲಾಗಿದೆ. ಬಿಜೆಪಿ ಬರಬೇಕು ಬಿಜೆಪಿ ಅಥಣಿಯಲ್ಲಿ ಅಭಿವೃದ್ದಿ ಮಾಡಿದೆ ಎಂದಿದ್ದಾರೆ 

Video Top Stories