ಡಿಕೆಶಿ ಸಾಹುಕಾರ್ ಮಧ್ಯೆ ವಾಗ್ಯುದ್ಧ: ಮತ್ತೆ 'ಸಿಡಿ'ದೆದ್ದ ಸಾಹುಕಾರ್‌

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಸಿಡಿದೆದ್ದಿರುವ ಸಾಹುಕಾರ್ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ.  ಸಿಡಿ ವಿಚಾರವಾಗಿ ಮತ್ತೆ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

First Published Mar 13, 2023, 1:43 PM IST | Last Updated Mar 13, 2023, 1:44 PM IST

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಸಿಡಿದೆದ್ದಿರುವ ಸಾಹುಕಾರ್ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ.  ಸದ್ಯ ಜಾರಕಿಹೊಳಿ ಸಿಡಿ ವಿಚಾರವಾಗಿ ಮತ್ತೆ ವಾಗ್ದಾಳಿ ನಡೆಸಿದ್ದು, ಕಳೆದ 2 ವರ್ಷಗಳಿಂದ ಮಹಾನಾಯಕ ಸಿಡಿ ಇಟ್ಟುಕೊಂಡು ಕುಳಿತಿದ್ದಾನೆ. ಅದು ನಿಜ ಆಗಿದ್ದರೆ ಆಗಲೇ ಬಿಡುಗಡೆ ಮಾಡಬೇಕಿತ್ತು. ಈಗ ಎಲೆಕ್ಷನ್ ಸಂದರ್ಭದಲ್ಲಿ ಏಕೆ? ಲಿಂಗಾಯತ, ಮುಸ್ಲಿಂ, ಎಸ್‌ಸಿ ಸಮುದಾಯದವರನ್ನು ಎತ್ತಿಕಟ್ಟಲು ಕುತಂತ್ರ ಮಾಡುತ್ತಿದ್ದಾನೆ. ಡಿಕೆಶಿ ಉದ್ದೇಶ ಅದೇ, ಅವನಿಗೆ ಬೇರೆ ದಾರಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಗೆ ಡಿಕೆಶಿಗೆ ರಮೇಶ್ ಜಾರಕಿಹೊಳಿ ಬಹಿರಂಗ ಸವಾಲು ಹಾಕಿದ್ದು, ಯುದ್ಧ ಮಾಡೋಣ ಬಾ, ಬೇಕಾದಷ್ಟು ಗಟ್ಟಿ ಇದ್ದೇನೆ. ಕನಕಪುರಕ್ಕೆ ಬಾ ಎಂದರೆ ಅಲ್ಲಿಯೇ ಬರುತ್ತೇನೆ ಬಾ ಎಂದು ಹೇಳಿದ್ದಾರೆ .