PartyRounds ಸೋತ ವ್ಯಕ್ತಿಗೆ ಕರ್ನಾಟಕ ಉಸ್ತುವಾರಿ, ಹಿರಿಯರಾದ ನಾವು ಕೈಕಟ್ಟಿ ಕೂರಬೇಕು, ಶೆಟ್ಟರ್ ಬಾಂಬ್!
ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ನಿರಾಕರಿಸಲು ಹಿಂದಿರುವ ಕಾರಣವನ್ನು ಹಾಗೂ ವ್ಯಕ್ತಿಯ ಹೆಸರನ್ನು ಸ್ವತಃ ಶೆಟ್ಟರ್ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಸದ್ಯ ಬಿಜೆಪಿಯಲ್ಲಿನ ಪರಿಸ್ಥಿತಿ ಹೇಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಕೇರಳದಲ್ಲಿ ಒಂದು ಸ್ಥಾನ ಬರಲಿಲ್ಲ, ತಮಿಳುನಾಡಲ್ಲಿ ಒಂದೆರಡು ಸ್ಥಾನ, ಪಶ್ಚಿಮ ಬಂಗಾಳದಲ್ಲಿ ಹೆಸರಿಲ್ಲ. ಇಷ್ಟೆಲ್ಲಾ ಕಡೆ ಕಳುಹಿಸಿ ಉಸ್ತುವಾರಿ ನೋಡಿಕೊಂಡ ಸೋಲಿನ ಸರದಾರನಿಗೆ ಕರ್ನಾಟಕದ ಉಸ್ತುವಾರಿ ಕೊಡಲಾಗಿದೆ. ನಮ್ಮ ಸರ್ಕಾರ ಇರುವಾಗ ನಮ್ಮ ಕೆಳಗೆ ಕೆಲಸ ಮಾಡಿದ ಅಣ್ಣಾಮಲೈ ಮುಂದೆ ಮಾಜಿ ಸಿಎಂ ಆದ ನಾನು ಕೈಕಟ್ಟಿ ನಿಲ್ಲಬೇಕು. ಇದೆಲ್ಲಾ ಬಿಜೆಪಿಯಲ್ಲಿ ನಡೆಯುತ್ತಿದೆ. ಇದೇ ಕಾರಣಕ್ಕೆ ನಾನು ಹೊರಬಂದೇ ಎಂದು ಜಗಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ.