ಶಿಗ್ಗಾಂವಿ ಕಾಂಗ್ರೆಸ್‌ ಅಭ್ಯರ್ಥಿ ಹೋಟೆಲ್‌ ಮೇಲೆ ದಾಳಿ, 6 ಲಕ್ಷ ವಶ

 ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ ಖಾನ್‌ ಪಠಾಣ್‌ಗೆ ಸೇರಿದ ಹೋಟೆಲ್‌ ಮೇಲೆ  ಚುನಾವಣಾ ವಿಚಕ್ಷಣ ದಳ ದಾಳಿ ಮಾಡಿ,  ಆರು ಲಕ್ಷ ರೂಪಾಯಿ ವಶಕ್ಕೆ ಪಡೆದಿದೆ. 

Share this Video
  • FB
  • Linkdin
  • Whatsapp

ಮೇ 10 ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಬಹಿರಂಗ ಪ್ರಚಾರ ಸೋಮವಾರ ಸಂಜೆಯೇ ಮುಗಿದಿದೆ. ಈ ಮಧ್ಯೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ ಖಾನ್‌ ಪಠಾಣ್‌ಗೆ ಸೇರಿದ ಹೋಟೆಲ್‌ ಮೇಲೆ ಚುನಾವಣಾ ವಿಚಕ್ಷಣ ದಳ ದಾಳಿ ಮಾಡಿ, ಆರು ಲಕ್ಷ ರೂಪಾಯಿ ವಶಕ್ಕೆ ಪಡೆದಿದೆ. ಅದಲ್ಲದೆ ಈ ಹಣವನ್ನು ಮತದಾರರಿಗೆ ಹಂಚಲು ಸಂಗ್ರಹಿಸಿ ಇಡಲಾಗಿದೆ ಎನ್ನಲಾಗಿದ್ದು, ಒಂದೊಂದು ಕವರ್‌ನಲ್ಲಿ ಮೂರು ಸಾವಿರ ರೂಪಯಿ ಹಾಕಿಡಲಾಗಿತ್ತು ಎನ್ನಲಾಗಿದೆ. ಇನ್ನು ಘಟನೆ ಸಂಬಂಧ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಯಾಸೀರ್‌ ಖಾನ್‌ ಪಠಾಣ್‌ ಸಿ ಎಂ ಬಸವರಾಜ ಬೊಮ್ಮಾಯಿ ವಿರುದ್ದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು,ಮೊದಲು ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯರಾಗಿದ್ದರು.

Related Video