ಸಮೀಕ್ಷೆ ಬೆನ್ನಲ್ಲೇ ಅತಂತ್ರ ವಿಧಾನಸಭೆ ಆತಂಕ, ಶುರುವಾಗಿದೆ ರಣತಂತ್ರ!

ಮತಗಟ್ಟೆ ಸಮೀಕ್ಷೆ ಬಳಿಕ ಕಾಂಗ್ರೆಸ್‌ನಲ್ಲಿ ಉತ್ಸಾಹ, ಸಿಎಂ ಆಸೆ ಬಿಚ್ಚಿಟ್ಟ ಪರಮೇಶ್ವರ್, ಕರ್ನಾಟಕದಲ್ಲಿ ಆಪರೇಷನ್ ಭೀತಿ, ನಾಯಕರ ಜೊತೆ ಕಾಂಗ್ರೆಸ್ ಮೀಟಿಂಗ್, ಮತಗಟ್ಟೆ ಸಮೀಕ್ಷೆ ಸುಳ್ಳಾಗಲಿದೆ, ಬಿಜೆಪಿಗೆ ಬಹುಮತದ ವಿಶ್ವಾಸ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published May 11, 2023, 11:13 PM IST | Last Updated May 11, 2023, 11:33 PM IST

ಮತಗಟ್ಟೆಗಳ ಸಮೀಕ್ಷೆ ಹೊರಬಂದ ಬಳಿಕ ಸರಾಸರಿಯಲ್ಲೂ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸೂಚನೆ ನೀಡುತ್ತಿದೆ.ಬಹುತೇಕ ಮತಗಟ್ಟೆ ಸಮೀಕ್ಷೆಯಲ್ಲಿ ಅತಂತ್ರ ವಿಧಾನಸಭೆ ಕಾಣಿಸುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಮಹತ್ವದ ಸಭೆ ನಡೆಸಿದೆ. ಬಹುಮತಕ್ಕೆ ಕೆಲ ಸ್ಥಾನ ಕಡಿಮೆಯಾದರೆ ಮುಂದೇನು? ಈ ಕುರಿತು ಸರಣಿ ಸಭೆ ನಡೆಸಲಾಗುತ್ತಿದೆ.ಜೂಮ್ ಮೀಟಿಂಗ್ ಮೂಲಕ ನಾಯಕರ ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ. ಇತ್ತ ಬಿಜೆಪಿ ಕೂಡ ಪ್ಲಾನ್ ಬಿಗೆ ರೆಡಿಯಾಗಿದೆ. ಚುನಾವಣೆ ಬಳಿಕ ಪ್ರಕಟಗೊಂಡಿರುವ ಮತಗಟ್ಟೆ ಸಮೀಕ್ಷೆ ಕಾಂಗ್ರೆಸ್ ಉತ್ಸಾಹ ಇಮ್ಮಡಿಗೊಳಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಡಾ.ಜಿ ಪರಮೇಶ್ವರ್ ಸಿಎಂ ಆಸೆಯನ್ನೂ ಬಿಚ್ಚಿಟ್ಟಿದ್ದಾರೆ.