ಬಿಜೆಪಿ ಮತ್ತೊಂದು ವಿಕೆಟ್ ಪತನ, ಜೆಡಿಎಸ್ ಸೇರಿದ ಮರುಕ್ಷಣದಲ್ಲೇ ಆಯನೂರ್‌ಗೆ ಟಿಕೆಟ್!

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಗಳ ಒಂದೊಂದೆ ವಿಕೆಟ್ ಕಳಚುತ್ತಿದೆ. ಮತ್ತೊಂದ ಕಡೆಯಿಂದ ಸೇರ್ಪಡೆಯಾಗುತ್ತಿದ್ದಾರೆ. ಇದೀಗ ಬಿಜೆಪಿಗೆ ಆಯನೂರು ಮಂಜುನಾಥ್ ಗುಡ್ ಬೈ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಶಿವಮೊಗ್ಗ(ಏ.19) ಟಿಕೆಟ್ ಸಿಗದ ಕಾರಣಕ್ಕೆ ನಾಯಕ ಆಯನೂರು ಮಂಜುನಾಥ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಂಜುನಾಥ್ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಇಷ್ಟೇ ಅಲ್ಲ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪ ಬದಲು ತನಗೆ ಟಿಕೆಟ್ ನೀಡಬೇಕು ಎಂದು ಕಸರತ್ತು ಮಾಡಿದ್ದ ಮಂಜುನಾತ್ ಬಳಿಕ ಪಕ್ಷದ ನಿಯಮ ಮೀರಿದ್ದರು. ಇತ್ತ ಈಶ್ವರಪ್ಪ ಚುನಾವಣಾ ಕಣದಿಂದ ಹಿಂದೆ ಸರಿದರೂ, ಆಯನೂರ್‌ಗೆ ಟಿಕೆಟ್ ನೀಡಲು ಹೈಕಮಾಂಡ್ ನಿರಾಕರಿಸಿತ್ತು. ಇದೀಗ ಬಿಜೆಪಿಗೆ ರಾಜೀನಾಮೆ ನೀಡಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

Related Video