ನನ್ನ ವೋಟು ನನ್ನ ಮಾತು: ಬಬಲೇಶ್ವರ ಮಂದಿಯ ಮೂಡ್‌ ಹೇಗಿದೆ?

ಚುನಾವಣೆ ಸಮೀಪಿಸಿದೆ. ಒಂದೆಡೆ ರಾಜಕಾರಣಿಗಳು ಕಸರತ್ತು ನಡೆಸ್ತಾ ಇದ್ದಾರೆ, ಇನ್ನೊಂದು ಕಡೆ ಮತದಾರರು ಕೂಡಾ ಕಸರತ್ತುಗಳನ್ನ ಗಮನಿಸ್ತಾ ಇದ್ದಾರೆ. ಬಬಲೇಶ್ವರಲ್ಲಿ ಹೇಗಿದೆ ಜನರ ಮೂಡ್‌ ನೋಡೋಣ ಬನ್ನಿ.

Share this Video
  • FB
  • Linkdin
  • Whatsapp

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ ಸುವರ್ಣ ನ್ಯೂಸ್‌ ಬಬಲೇಶ್ವರ ಮತಕ್ಷೇತ್ರ ಮತದಾರರ ಅಭಿಪ್ರಾಯ ಸಂಗ್ರಹಿಸಿದೆ. ಮುಂದಿನ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇನೆ. ನಮ್ಮ ಕ್ಷೇತ್ರದ ಶಾಸಕ ಎಂ.ಬಿ.ಪಾಟಿಲ್ ಅವರು ಒಳ್ಳೆಯ ಅಭಿವೃದ್ದಿ ಕೆಲಸಗಳನ್ನ ಮಾಡುವ ಜೊತೆಗೆ ರೈತರಿಗೆ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ನಮಗೆ ಎಲ್ಲ ರೀತಿಯ ಸಹಾಯವನ್ನು ಮಾಡಿದ್ದಾರೆ. ಮುಖ್ಯವಾಗಿ ಅವರು ನಮಗೆ ರಸ್ತೆ ಅಭಿವೃದ್ದಿ ಮಾಡಿಸಿದರೆ ಸಾಕು ಎಂದು ರೈತ ಮತದಾರ ತಿಳಿಸಿದ್ದಾರೆ. ಇನ್ನು ನಾನು ಮುಂದಿನ ಚುನಾವಣೆಯಲ್ಲಿ ಎಂ.ಬಿ.ಪಾಟೀಲ್ ಅವರನ್ನು ಬೆಂಬಲಿಸುತ್ತೇನೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಯಾಕಂದರೆ ಸಿಎಂ ಬೊಮ್ಮಾಯಿ ಆಡಳಿತ ಚೆನ್ನಾಗಿದೆ ಎಂದು ಇನ್ನೊಬ್ಬ ಮತದಾರ ತಿಳಿಸಿದ್ದಾರೆ. 

Related Video