Karnataka Election : ರಾಜ್ಯದಲ್ಲಿ ನಮೋ ಪೊಲಿಟಿಕಲ್‌ ಮೆಗಾ ಶೋ: ಹಳೇ ಮೈಸೂರು ಮೇಲೆ 'ಕೇಸರಿ' ಕಣ್ಣು

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಇಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಪೊಲಿಟಿಕಲ್ ಮೆಗಾ ಶೋ ನಡೆಯಲಿದೆ.

Share this Video
  • FB
  • Linkdin
  • Whatsapp

ಬಿಜೆಪಿಗೆ ಬೂಸ್ಟರ್‌ ಡೋಸ್‌ ನೀಡಲು ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸಿದ್ದು, ಬೆಂಗಳೂರಿನಲ್ಲಿ ಏರ್ ಇಂಡಿಯಾ ಶೋಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಕರ್ನಾಟಕ ಕುರುಕ್ಷೇತ್ರದ ಮೇಲೆ ಪ್ರಧಾನಿ ಮೋದಿ ಕಣ್ಣಿಟ್ಟಿದ್ದು, ಪ್ರಧಾನಿ ಮೋದಿ ಮೂಲಕ ರಾಜ್ಯ ಬಿಜೆಪಿ ನಾಯಕರಿಂದ ಮತ ಬೇಟೆ ಆರಂಭವಾಗಿದೆ. ಬಿಜೆಪಿ ಟಾರ್ಗೆಟ್‌ 150 ರೀಚ್‌ ಆಗಲು ಮೈಸೂರು ಗೆಲ್ಲಲೇ ಬೇಕು ಎಂದು ಕೇಸರಿ ಪಾಳೆಯ ಅಖಾಡಕ್ಕೆ ಸಜ್ಜಾಗಿದೆ. ಏರ್‌ ಶೋ ಉದ್ಘಾಟನೆ ಬಳಿಕ ಮೋದಿ ಪೊಲಿಟಿಕಲ್‌ ಮೆಗಾ ಶೋ ಆರಂಭವಾಗಲಿದೆ. ಕಳೆದ ಬಾರಿ ಕೋಲಾರ, ರಾಮನಗರ ಹಾಗೂ ಮಂಡ್ಯದಲ್ಲಿ ಬಿಜೆಪಿ ಶುನ್ಯ ಸಾಧನೆ ಮಾಡಿದ್ದು, ಬೆಂಗಳೂರಿನ 28ಕ್ಷೇತ್ರಗಳಲ್ಲಿ ಮೋದಿಯಿಂದ ಕೇಸರಿ ರಣಕಹಳೆ ಮೊಳಗಲಿದೆ. ಸಂಪೂರ್ಣ ಬೆಂಗಳೂರಿನಲ್ಲಿ ಬಿಜೆಪಿ ಗೆಲ್ಲಲು ನಮೋ ಪ್ಲಾನ್‌ ಮಾಡಿದ್ದಾರೆ.

Related Video