Election special: ಚಾಮುಂಡಿ ಸೇಡು ತೀರಿಸಿಕೊಳ್ಳಲು ಹೋಗಿ ಎಡವಿ ಬಿದ್ದರಾ ಸಿದ್ದು..?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸೋಲನುಭವಿಸಿದ್ದ ಸಿದ್ದರಾಮಯ್ಯ ಈ ಬಾರಿ ಸೋಲನ್ನು ತೀರಿಸಿಕೊಳ್ಳಲು ಮುಂದಾಗಿ ತಾವೇ ಎಡವಿದ್ದಾರೆ.

First Published May 12, 2023, 3:14 PM IST | Last Updated May 12, 2023, 3:14 PM IST

ಬೆಂಗಳೂರು (ಮೇ 12): ರಾಜ್ಯದಲ್ಲಿ ಚುನಾವಣೆ ಮುಗಿದಿದೆ. ಇನ್ನು ಫಲಿತಾಂಶವಷ್ಟೇ ಬಾಕಿ. ಇಡೀ ರಾಜ್ಯ ಶನಿವಾರದ ಮಹಾತೀರ್ಪಿಗೆ ಕಾಯ್ತಾ ಇದೆ. ರಾಜ್ಯ ಪಟ್ಟ ಯಾರಿಗೆ..? ಮುಖ್ಯಮಂತ್ರಿ ಯಾರು ಅನ್ನೋ ಪ್ರಶ್ನೆ ರಾಜ್ಯದ ಜನರನ್ನು ಯಕ್ಷಪ್ರಶ್ನೆಯಾಗಿ ಕಾಡ್ತಾ ಇದೆ. ಇದೇ ಹೊತ್ತಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಟ್ಟಾಗಿದ್ದಾರೆ. ತಮ್ಮದೇ ಪಕ್ಷದ ಅಭ್ಯರ್ಥಿಗೆ ಮೋಸಗಾರನ ಹಣೆಪಟ್ಟಿ ಕಟ್ಟಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯನವರು ಸಿಟ್ಟಾಗಿದ್ದೇಕೆ...?

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರೋ ಮಾವಿನಹಳ್ಳಿ ಸಿದ್ದೇಗೌಡ ಬಗ್ಗೆ. ಅಷ್ಟಕ್ಕೂ ಈ ಮಾವಿನಹಳ್ಳಿ ಸಿದ್ದೇಗೌಡ ಯಾರು ಅಂತೀರಾ..? ಇವ್ರು ಜೆಡಿಎಸ್"ನಲ್ಲಿದ್ದವರು.. ಚಾಮುಂಡೇಶ್ವರಿಯ ಜೆಡಿಎಸ್ ಶಾಸಕ ಜಿಟಿ ದೇವೇಗೌಡ್ರ ರೈಟ್ ಹ್ಯಾಂಡ್ ಆಗಿದ್ದವರು. ಚುನಾವಣೆಗೂ ಮೊದ್ಲು ಸಿದ್ದೇಗೌಡರನ್ನು ಕಾಂಗ್ರೆಸ್‌ಗೆ ಸೆಳೆದಿದ್ದ ಸಿದ್ದರಾಮಯ್ಯ, ಜಿಟಿಡಿ ಆಪ್ತನಿಗೇ ಕಾಂಗ್ರೆಸ್ ಟಿಕೆಟ್ ಕೊಡಿಸಿ ಚದುರಂಗದಲ್ಲಿ ದಾಳ ಉರುಳಿಸಿ ಬಿಟ್ಟಿದ್ದರು. ಮುಳ್ಳನ್ನು ಮುಳ್ಳಿನಿಂದ್ಲೇ ತೆಗೆಯುವ ತಂತ್ರಗಾರಿಕೆ ಮಾಡಿದ್ದರು. ಸ್ವತಃ ತಾವೇ ಮುಂದೆ ನಿಂತು ಚಾಮುಂಡೇಶ್ವರಿಯಲ್ಲಿ ಮಾವಿನಹಳ್ಳಿ ಸಿದ್ದೇಗೌಡ ಗೆಲುವಿಗೆ ರಣತಂತ್ರಗಳನ್ನು ಹೆಣೆದಿದ್ದರು. ಅದೇನಾದ್ರೂ ಸರಿ.. ಜಿಟಿ ದೇವೇಗೌಡ್ರನ್ನು ಸೋಲಿಸಿಯೇ ಸಿದ್ಧ ಅಂತ ಸಿದ್ದರಾಮಯ್ಯ ತೊಡೆ ತಟ್ಟಿ ನಿಂತಿದ್ದರು. ಸ್ವತಃ ಸಿದ್ದೇಗೌಡರನ್ನು ಪಕ್ಕದಲ್ಲಿ ನಿಲ್ಲಿಸ್ಕೊಂಡು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾಷಣವನ್ನೂ ಮಾಡಿದ್ದರು.

ಆದರೆ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರೋ ಮಾವಿನಹಳ್ಳಿ ಸಿದ್ದೇಗೌಡ ಯಾರು ಅಂತೀರಾ..? ಇವರು ಜೆಡಿಎಸ್"ನಲ್ಲಿದ್ದವರು. ಚಾಮುಂಡೇಶ್ವರಿಯ ಜೆಡಿಎಸ್ ಶಾಸಕ ಜಿಟಿ ದೇವೇಗೌಡರ ರೈಟ್ ಹ್ಯಾಂಡ್ ಆಗಿದ್ದವರು. ಚುನಾವಣೆಗೂ ಮೊದ್ಲು ಸಿದ್ದೇಗೌಡರನ್ನು ಕಾಂಗ್ರೆಸ್‌ಗೆ ಸೆಳೆದಿದ್ದ ಸಿದ್ದರಾಮಯ್ಯ, ಜಿಟಿಡಿ ಆಪ್ತನಿಗೇ ಕಾಂಗ್ರೆಸ್ ಟಿಕೆಟ್ ಕೊಡಿಸಿ ಚದುರಂಗದಲ್ಲಿ ದಾಳ ಉರುಳಿಸಿ ಬಿಟ್ಟಿದ್ದರು. ಆದರೆ, ಮಾವಿನಹಳ್ಳಿ ಸಿದ್ದೇಗೌಡ ನಸಗುನ್ನು ಆಟವನ್ನು ಆಡಿದ್ದಾನೆ ಎಂದು ಸ್ಥಳೀಯ ಜನರು ಸಿದ್ದರಾಮಯ್ಯನಿಗೆ ತಿಳಿಸಿದ್ದಾರೆ. ಜೊತೆಗೆ, ಸಿದ್ದರಾಮಯ್ಯ ಕೂಡ ಮಾವಿನಹಳ್ಳಿ ಸಿದ್ದೇಗೌಡನ ಬಗ್ಗೆ ಕಿಡಿಕಾರಿದ್ದಾರೆ.

Video Top Stories