Asianet Suvarna News Asianet Suvarna News

News Hour: ಗ್ಯಾರಂಟಿ ಸರ್ಕಾರಕ್ಕೆ ಸ್ಕೆಚ್ ಹಾಕ್ತಿರೋರು ಯಾರು?

ಯಾರೂ ಏನನ್ನೂ ಕೇಳದೆ ಸ್ವತಃ ಡಿಕೆ ಶಿವಕುಮಾರ್‌ ಅವರೇ ಮಾಧ್ಯಮಗಳ ಮುಂದೆ ಸರ್ಕಾರ ಉರುಳಿಸಲು ವಿದೇಶಗಳಲ್ಲಿ ಪ್ಲ್ಯಾನ್‌ ನಡೆಯುತ್ತಿದೆ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಬೆಂಗಳೂರು (ಜು.24): ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂಥ ಹೇಳಿಕೆಯನ್ನು ಡಿಕೆ ಶಿವಕುಮಾರ್‌ ನೀಡಿದ್ದು, ಅದರ ಬೆನ್ನಲ್ಲಿಯೇ ಗ್ಯಾರಂಟಿ ಸರ್ಕಾರಕ್ಕೆ ಸ್ಕೆಚ್‌ ಹಾಕಿದ್ದು ಯಾರು ಅನ್ನೋ ಕುತೂಹಲ ಹುಟ್ಟಿಕೊಂಡಿದೆ. ಕುಮಾರಸ್ವಾಮಿ ವಿದೇಶ ಪ್ರವಾಸಕ್ಕೆ ಹೋದ ಸಮಯದಲ್ಲಿಯೇ ಡಿಕೆಶಿ ಈ ಮಾತು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಇಂದು ದೊಡ್ಡ ಬಾಂಬ್‌ ಎಸೆದಿದ್ದಾರೆ. ವಿದೇಶದಲ್ಲಿ ಕುಳಿತುಕೊಂಡು ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸಲು ಆಪರೇಷನ್‌ ನಡೆಯುತ್ತಿದೆ ಎಂದು ಹೇಳಿದ್ದು ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದೆ.

ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಿಂದ 2.09 ಲಕ್ಷ ಕೋಟಿ ಬ್ಯಾಡ್‌ ಲೋನ್‌ ರೈಟ್‌ ಆಫ್‌!

ವಿದೇಶದಲ್ಲಿ ನಮ್ಮ ಸರ್ಕಾರವನ್ನು ಬೀಳಿಸುವ ಕೆಲಸ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನೀಡಿದ ಹೇಳಿಕೆ ಇಂದು ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಯಿತು. ಬೆಂಗಳೂರಲ್ಲಿ ಆಪರೇಷನ್‌ ಮಾಡಿದರೆ, ಗೊತ್ತಾಗುತ್ತೆ ಅಂತಾ ಸಿಂಗಾಪುರದಲ್ಲಿ ಈ ಕೆಲಸ ನಡೆಯುತ್ತಿದೆ ಎಂದಿದ್ದಾರೆ.