ಚುನಾವಣೋತ್ತರ ಲೆಕ್ಕಚಾರ; 'ಹೊಸ ಮೈತ್ರಿ ಸರ್ಕಾರ'ದ ಸಿಎಂ-ಡಿಸಿಎಂ ಇವರಾಗ್ತಾರಾ?
- ರಾಜ್ಯ ರಾಜಕೀಯದಲ್ಲಿ ಶುರುವಾಗಿದೆ ಚುನಾವಣೋತ್ತರ ಲೆಕ್ಕಚಾರ
- ಹೊಸ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿರುವ ಕೈ-ದಳಪತಿಗಳು
- ಮೈತ್ರಿ ಸರ್ಕಾರ ಬಂದರೆ ಯಾರಾಗಲಿದ್ದಾರೆ ಸಿಎಂ, ಡಿಸಿಎಂ?
ಬೆಂಗಳೂರು (ಡಿ.02): ಸಾಕಷ್ಟು ಸರ್ಕಸ್ ಮಾಡಿದ ನಂತರ ಬಿ.ಎಸ್. ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಇನ್ನೊಂದು ಕಡೆ, ಯಡಿಯೂರಪ್ಪ ಸರ್ಕಾರ ಉರುಳಿಸಿ, ಮತ್ತೆ ಮೈತ್ರಿ ಸರ್ಕಾರ ಮಾಡುವ ಕಸರತ್ತುಗಳು ಕೂಡಾ ನಡೀತಾ ಇದೆ. ಹೊಸ ಲೆಕ್ಕಾಚಾರ ಪ್ರಕಾರ ನೂತನ ಸರ್ಕಾರ ಬಂದರೆ ಯಾರಾಗಲಿದ್ದಾರೆ ಸಿಎಂ, ಡಿಸಿಎಂ? ಇಲ್ಲಿದೆ ವಿವರ
ಡಿ.05ಕ್ಕೆ ಉಪಚುನಾವಣೆ ನಡೆಯಲಿದ್ದು, ಡಿ.09ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಸರ್ಕಾರ ಉಳಿಯಬೇಕಾದರೆ, ಕನಿಷ್ಠ 7 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು.