Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ 'ನಾನೇ ಸಿಎಂ' ಫೈಟ್‌, ಅಭಿವೃದ್ಧಿ ವಿಚಾರಕ್ಕೆ ಇಲ್ಲ ಇಂಟ್ರಸ್ಟ್‌!

ಕರ್ನಾಟಕದಲ್ಲಿ ಅಭಿವೃದ್ಧಿ ವಿಚಾರ ಚರ್ಚೆಯೇ ಆಗುತ್ತಿಲ್ಲ. ದಿನ ಬೆಳಗಾದರೆ, ರಾಜಕೀಯದ ವಿಚಾರವಾಗಿಯೇ ಸರ್ಕಾರದ ಸಚಿವರು ಶಾಸಕರು ಹಾಗೂ ಬಣಗಳ ನಡುವೆ ಟಾಕ್‌ಫೈಟ್‌ ಜೋರಾಗಿದೆ. ಇದರ ನಡುವೆ ಸಿಎಂ ಸಿದ್ಧರಾಮಯ್ಯ ಮುಂದಿನ ಐದು ವರ್ಷ ನಾನೇ ಸಿಎಂ ಎಂದು ಹೇಳಿರುವುದು ಕೋಲಾಹಲಕ್ಕೆ ಕಾರಣವಾಗಿದೆ.

ಬೆಂಗಳೂರು (ನ.3): ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗಿದೆ. ‘ನಾನೇ ಸಿಎಂ’ ಎಂದ ಸಿದ್ಧರಾಮಯ್ಯ ವಿರುದ್ಧ ಬಂಡಾಯದ ಕಿಡಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸಿದ್ಧರಾಮಯ್ಯ ಮುಂದಿನ ಐದು ವರ್ಷ ನಾನೇ ಸಿಎಂ ಎಂದು ಹೇಳಿದ್ದರ ಹಿಂದಿನ ಮರ್ಮವೇನು ಅನ್ನೋದರ ಚರ್ಚೆಯೂ ಜೋರಾಗಿದೆ.

‘ನಾನೇ ಸಿಎಂ’ ಎಂದು ಸಿದ್ದು ಸಂದೇಶ ರವಾನಿಸಿದ್ದೇಕೆ ಎನ್ನುವ ಚರ್ಚೆಯ ನಡುವೆ, 5 ವರ್ಷವೂ ಡಿಕೆ ಶಿವಕುಮಾರ್‌ ಅವರು ಡಿಸಿಎಂ ಆಗಿಯೇ ಇರುತ್ತಾರಾ ಎನ್ನುವ ಅನುಮಾನ ಕಾಡಿವೆ. ಇದರ ನಡುವೆ ಜನಸಾಮಾನ್ಯ ಮಾತ್ರ ಅಭಿವೃದ್ಧಿ ವಿಚಾರ ಸರ್ಕಾರದಲ್ಲಿ ಚರ್ಚೆಯೇ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಬಸ್ ಮಾತ್ರ ಓಡ್ತಿದೆ ಉಳಿದವು ಠುಸ್: ಕೆಎಸ್ ಈಶ್ವರಪ್ಪ ವಾಗ್ದಾಳಿ

ಕರ್ನಾಟಕ ಮರು ನಾಮಕರಣ ಆಗಿ 50 ವರ್ಷಾಚರಣೆ ನಿಮಿತ್ತ ಗದಗದಲ್ಲ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿದ್ದರೂ ಸಿಎಂ ಹಾಗೂ ಡಿಸಿಎಂ ಮಾತನಾಡಿಲ್ಲ. ನಾಡಗೀತೆ ವೇಳೆ ಮುಖ ತಿರುಗಿಸಿ ಸಿದ್ಧರಾಮಯ್ಯ ನಿಂತುಕೊಂಡಿದ್ದರು.

Video Top Stories