Suvarna Special: 7 ರಹಸ್ಯ,7 ಗುಟ್ಟು, ಜಿದ್ದಿನ ಜಲ್ಲಿಕಟ್ಟು, ಏನಿದು ಸೀಕ್ರೆಟ್ಟು?

ಸಿದ್ದರಾಮಯ್ಯನವರ ಮುಂದೆ 45 ವರ್ಷಗಳಿಂದ ಭೇದಿಸಲಾಗದ ಏಳು ಸುತ್ತಿನ ಕೋಟೆ ಇದೆ. ದೇವರಾಜ ಅರಸು ಕಟ್ಟಿದ ಈ ಕೋಟೆಯನ್ನು ಭೇದಿಸಲು ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್‌ನ ಬೆಂಬಲ ಬೇಕಿದೆ.

Santosh Naik  | Published: Jan 18, 2025, 8:07 PM IST

ಬೆಂಗಳೂರು (ಜ.18): ಏಳು ಸುತ್ತಿನ ಕೋಟೆ.. ಸಮರವೀರ ಸಿದ್ದರಾಮಯ್ಯನವರ ಮುಂದೆ ಅದೊಂದು ಏಳು ಸುತ್ತಿನ ಕೋಟೆ.. 45 ವರ್ಷಗಳ ಹಿಂದೆ ಎದ್ದು ನಿಂತಿದ್ದ ಆ ಕೋಟೆಯನ್ನು ಭೇದಿಸೋದಿರ್ಲಿ, ಇಲ್ಲಿವರೆಗೆ ಟಚ್ ಮಾಡೋದಕ್ಕೂ ಸಾಧ್ಯವಾಗಿಲ್ಲ. 

ಆ ಕೋಟೆಯ ಶಕ್ತಿಯ ಅತಿರಥ ಮಹಾರಥಿಗಳೇ ಮುಂದೆ ಕೈ ಚೆಲ್ಲಿ ಕೂತಿರೋ ಹೊತ್ತಲ್ಲಿ ಕೋಟೆ ಬಾಗಿಲಲ್ಲಿ ಬಂದು ನಿಂತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.. ಹಾಗಾದ್ರೆ ಯಾರ ಕೈಯಲ್ಲೂ ಸಾಧ್ಯವಾಗದ್ದನ್ನು ಸಿದ್ದರಾಮಯ್ಯ ಸಾಧಿಸ್ತಾರಾ..? ಅಷ್ಟಕ್ಕೂ ಏನದು ಏಳು ಸುತ್ತಿನ ಕೋಟೆ ರಹಸ್ಯ..? 

 

Breaking: ಮುಡಾ ಕೇಸ್‌, ಇಡಿಯಿಂದ 300 ಕೋಟಿಗೂ ಅಧಿಕ ಮೌಲ್ಯದ 142 ಸ್ಥಿರಾಸ್ತಿಗಳ ಮುಟ್ಟುಗೋಲು!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದಿರೋದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಟ್ಟಿರೋ ಏಳು ಸುತ್ತಿನ ಕೋಟೆ. ಆ ಕೋಟೆಯನ್ನು ಭೇದಿಸಲು ಸಿದ್ದರಾಮಯ್ಯಗೆ ಬೇಕಿರೋದು ಕಾಂಗ್ರೆಸ್ ಹೈಕಮಾಂಡ್ ಶ್ರೀರಕ್ಷೆ.