ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯವು ₹300 ಕೋಟಿ ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳ ಹೆಸರಿನಲ್ಲಿ ಸೈಟ್‌ಗಳು ನೋಂದಣಿಯಾಗಿದ್ದವು ಎಂದು ಇಡಿ ತಿಳಿಸಿದೆ.

ಬೆಂಗಳೂರು (ಜ.17): ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಭರ್ಜರಿ ಅಪ್‌ಡೇಟ್‌ ಆಗಿದೆ. ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ ಪ್ರಕರಣಕ್ಕೆ ಸಂಬಂಧಪಟ್ಟಂತೆ 142 ಸ್ಥಿರಾಸ್ತಿಗಳ ಮುಟ್ಟುಗೋಲು ಮಾಡಿಕೊಂಡಿದೆ. ಅಂದಾಜು 300 ಕೋಟಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿಗಳು ಮುಟ್ಟಗೋಲು ಹಾಕಿಕೊಳ್ಳಲಾಗಿದೆ ಎಂದು ಎಕ್ಸ್‌ನಲ್ಲಿ ಮಾಹಿತಿ ನೀಡಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಏಜೆಂಟ್‌ಗಳಾಗಿ ಕೆಲಸ ಮಾಡುವವರ ಹೆಸರಿನಲ್ಲಿ ಸೈಟ್ ಗಳು ನೋಂದಾಣಿಯಾಗಿತ್ತು ಎಂಧು ಇಡಿ ಮಾಹಿತಿ ನೀಡಿದೆ.

ಮುಡಾ ಸೈಟ್ ಹಗರಣ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಇಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 300 ಕೋಟೆ ಮೌಲ್ಯದ ಆಸ್ತಿ ಜಪ್ತಿಯಾಗಿದೆ. ಮೈಸೂರಿನ ಗಂಗರಾಜು ಹಾಗೂ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನ ಹಿನ್ನಲೆಯಲ್ಲಿ ತನಿಖೆ ಆರಂಭ ಮಾಡಿತ್ತು. ಈ ಹಿಂದೆ ಮೈಸೂರು ಮುಡಾ ಕಚೇರಿ ಸೇರಿ ಹಲವಡೆ ಇಡಿ ಅಧಿಕಾರಿಗಳು ರೇಡ್ ಮಾಡಿದ್ದರು.

ಸಿಎಂ ನಡುಗಿಸಿದ ಸ್ನೇಹಮಯಿ ಕೃಷ್ಣ ರಿಯಲ್ ಹೀರೋ ಆದ್ರಾ? ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ ಕಿರುಕುಳ ದೂರು!

ಹಗರಣ ಸಂಬಂಧ ಇಡಿಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. 'ಕರ್ನಾಟಕದ ಹಾಲಿ ಸಿಎಂ ಸಿದ್ದರಾಮಯ್ಯ , ಪತ್ನಿ ಪಾರ್ವತಿ ಹಾಗೂ ಇತರರ ವಿರುದ್ದ ದಾಖಲಾಗಿದ್ದ ಪ್ರಕರಣ ಇದಾಗಿದೆ. ಮೈಸೂರು ಲೋಕಾಯುಕ್ತ ಪೊಲೀಸರು ಎಫ್ ಐಆರ್ ಕೂಡ ದಾಖಲಿಸಿದ್ದಾರೆ. ಮುಡಾ ಸ್ವಾಧೀನ ಪಡಿಸಿಕೊಂಡಿದ್ದ ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನು ಬದಲಾಗಿ 14 ನಿವೇಶನ ಪಡೆದಿರೋ ಆರೋಪ ಇದು. ಸಿಎಂ ಪತ್ನಿ ಪಾರ್ವತಿ 14 ಸೈಟ್ ಪಡೆದ ಆರೋಪ ಇತ್ತು. ಪತ್ನಿಗೆ ಸೈಟ್ ಮಂಜೂರು ಮಾಡಿಸಿಕೊಳ್ಳಲು ಸಿಎಂ ತಮ್ಮ ರಾಜಕೀಯ ಪ್ರಭಾವ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಮುಡಾ ಈ ಭೂಮಿಯನ್ನು 3 ಲಕ್ಷದ 23 700 ರೂಪಾಯಿಗೆ ಸ್ವಾಧೀನ ಪಡಿಸಿಕೊಂಡಿತ್ತು. 14 ನಿವೇಶನದ ರೂಪದಲ್ಲಿ ಪಡೆದ ಪರಿಹಾರವು 56 ಕೋಟಿ ಮೌಲ್ಯವಾಗಿತ್ತು.ಸಿಎಂ ಪತ್ನಿ ಬಿ.ಎಂ. ಪಾರ್ವತಿಗೆ ಅಕ್ರಮ ನಿವೇಶನ ಹಂಚಿಕೆಯಲ್ಲಿ ಮುಡಾ ಮಾಜಿ ಆಯುಕ್ತ ನಟೇಶ್ ಪಾತ್ರವಿದೆ. ಸಿಎಂ ಪತ್ನಿಗೆ ಹಂಚಿಕೆಯಾದ ಸೈಟ್ ಗಳ ಹೊರತಾಗಿಯೂ ಹೆಚ್ಚಿನ ನಿವೇಶನಗಳಲ್ಲಿ ಅಕ್ರಮ ನಡೆದಿರೋದು ತನಿಖೆಯಿಂದ ಸಾಬೀತಾಗಿದೆ. ಮುಡಾ ಸೈಟ್ ಅಕ್ರಮವಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪರಿಹಾರವಾಗಿ ಹಂಚಿಕೆ ಮಾಡಲಾಗಿದೆ. ಈ ಹಂಚಿಕೆಯಾದ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ.ಸೈಟ್ ಮಾರಾಟ ಅಕ್ರಮವಾಗಿ ನಡೆದಿದ್ದು,ಇದರಿಂದ ಕೋಟ್ಯಾಂತರ ಲಾಭಗಳಿಸಿದ್ದಾರೆ ಎಂದು ತಿಳಿಸಿದೆ.

ಕಾಂಗ್ರೆಸ್ ಮುಖಂಡನಿಂದ ಸ್ನೇಹಮಯಿ ಕೃಷ್ಣಗೆ ಜೀವ ಬೆದರಿಕೆ; ರಕ್ಷಣೆ ಕೋರಿ ಮೋದಿ, ಅಮಿತ್ ಶಾಗೆ ಪತ್ರ!

ಲಾಭದಿಂದ ಬಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಕಾನೂನು ಪ್ರಕಾರವಾಗಿಯೇ ಮುಡಾ ಸೈಟ್ ಪಡೆಯಲಾಗಿದೆ ಎಂದು ಮುಡಾ ದಾಖಲಾತಿಗಳಲ್ಲಿ ಉಲ್ಲೇಖಿಸಲಾಗಿದೆ. ಇಡಿ ಅಧಿಕಾರಿಗಳ ದಾಳಿ ವೇಳೆ ಪ್ರಭಾವಿ ವ್ಯಕ್ತಿಗಳು, ರಿಯಲ್‌ಎಸ್ಟೇಟ್ ಉದ್ಯಮಿಗಳ ಬೇನಾಮಿ ವ್ಯಕ್ತಿಗಳು ಮತ್ತು ನಕಲಿ ವ್ಯಕ್ತಿ ಹೆಸರಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿರೋದು ಪತ್ತೆಯಾಗಿದೆ. ಮಾಜಿ ಮುಡಾ ಅಧ್ಯಕ್ಷ ಹಾಗೂ ಮುಡಾ ಆಯುಕ್ತರಿಗೆ ಸೇರಿದ ಸ್ಥಿರಾ ಆಸ್ತಿ ,ಮುಡಾ ನಿವೇಶನಗಳು ,ನಗದು ಇತ್ಯಾದಿಗಳ ಬಗ್ಗೆ ದಾಖಲೆ ಲಭ್ಯವಾಗಿದೆ. ಹೀಗೆ ಪಡೆದ ಅಕ್ರಮ ಹಣವನ್ನು ಮತ್ತಷ್ಟು ಅಕ್ರಮವಾಗಿ ಹಣವನ್ನು ವರ್ಗಾಯಿಸಲಾಗಿದೆ. ಈ ಪ್ರಕ್ರಿಯೆ ಕಾನೂನು ಬದ್ಧ ಎಂದು ದಾಖಲೆಗಳಲ್ಲಿ ಬಿಂಬಿಸಲಾಗಿದೆ. ಮುಡಾದ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸಂಬಂಧಿಕರ ಹೆಸರಿನ ಆಸ್ತಿಯಾಗಿದ್ದು, ಐಷಾರಾಮಿ ವಾಹನಗಳು ಇತ್ಯಾದಿಗಳನ್ನು ಖರೀದಿಸಲು ಸಹಕಾರಿ ಸಂಘಗಳನ್ನು ಬಳಕೆ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.

Scroll to load tweet…