Asianet Suvarna News Asianet Suvarna News

ರಾಜ್ಯದಲ್ಲಿ ಸಿಎಂ ಕುರ್ಚಿ ಫೈಟಿಂಗ್ ಬೆನ್ನಲ್ಲೇ, ಅಮೇರಿಕಾದಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ಡಿಕೆಶಿ!

ರಾಜ್ಯದಲ್ಲಿ ಸಿಎಂ ಖುರ್ಚಿಗಾಗಿ ಬಡಿದಾಟ ಶುರುವಾಗಿರುವ ಬೆನ್ನಲ್ಲಿಯೇ ಡಿಸಿಎಂ ಡಿ.ಕೆ. ಶಿವಕುಮಾರ್ ಅಮೇರಿಕಾದಲ್ಲಿದ್ದ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶ ಏನೇ ಇದ್ದರೂ ಸಿದ್ದರಾಮಯ್ಯ ಮಾತ್ರ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಗುಟುರು ಹಾಕಿದ್ದಾರೆ.

First Published Sep 12, 2024, 8:30 PM IST | Last Updated Sep 12, 2024, 8:30 PM IST

ರಾಜ್ಯದಲ್ಲಿ ಸಿಎಂ ಖುರ್ಚಿಗಾಗಿ ಬಡಿದಾಟ ಶುರುವಾಗಿರುವ ಬೆನ್ನಲ್ಲಿಯೇ ಡಿಸಿಎಂ ಡಿ.ಕೆ. ಶಿವಕುಮಾರ್ ಅಮೇರಿಕಾದಲ್ಲಿದ್ದ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶ ಏನೇ ಇದ್ದರೂ ಸಿದ್ದರಾಮಯ್ಯ ಮಾತ್ರ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಗುಟುರು ಹಾಕಿದ್ದಾರೆ.

ಕಾಂಗ್ರೆಸ್'ನಲ್ಲಿ ನಿಲ್ಲುತ್ತಲೇ ಇಲ್ಲ ಸಿಂಹಾಸನ ಸಂಘರ್ಷ... ಸಿದ್ದರಾಮಯ್ಯ ಕುಳಿತ ಸಿಎಂ ಸಿಂಹಾಸನದ ಮೇಲೆ 93 ವರ್ಷದ ವಯೋವೃದ್ಧನ ಕಣ್ಣು ಬಿದ್ದಿದೆ. ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟ ಬೆಳಗಾವಿ ಸಾಹುಕಾರನ ಪರ ಬಿಜೆಪಿ ಶಾಸಕನ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪಟ್ಟದ ಗುದ್ದಾಟದಲ್ಲಿ ಸಿಎಂ ಸಿದ್ದರಾಮಯ್ಯ ಗುಟುರು ಹಾಕಿದ್ದಾರೆ. ಯಾವ ಅನುಮಾನವೂ ಬೇಡ, ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಶತ್ರುಗಳಿಗೆ, ಪ್ರತಿಸ್ಪರ್ಧಿಗಲಿಗೆ ಖಡಕ್ ಸಂದೇಶ ಕೊಟ್ಟಿದ್ದಾರೆ. ಆದರೆ, ಕುರ್ಚಿ ಫೈಟಿಂಗ್ ಬೆನ್ನಲ್ಲಿಯೇ ದೆಹಲಿಯ ಸಹವಾಸವೇ ಬೇಡವೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಮೆರಿಕಾ ಪ್ರವಾಸದಲ್ಲಿದ್ದ ರಾಹುಲ್‌ಗಾಂಧಿಯನ್ನು ಅಲ್ಲಿಯೇ ಭೇಟಿ ಮಾಡಿದ್ದಾರೆ. ಈ ಮೂಲಕ ಟ್ರಬಲರ್ ಶೂಟರ್, ಸಿಂಗಾಸನಕ್ಕೇ ಶೂಟ್ ಮಾಡಿದಂತಿದೆ.

ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಸಿಹಿಸುದ್ದಿ: ಎಲ್ಲ ವರ್ಗಕ್ಕೂ 3 ವರ್ಷ ವಯೋಮಿತಿ ಸಡಿಲಿಸಿದ ಸರ್ಕಾರ!

ಇನ್ನು ಸಿದ್ದರಾಮಯ್ಯ ನಿಮಗೆ ಯಾವ ಡೌಟೂ ಬೇಡ, ನಾನೇ ಮುಖ್ಯಮಂತ್ರಿಯಾಗಿ ಮುಂದುವರೀತೇನೆ ಎಂದು ಹೇಳಿದ್ದಾರೆ. ಆದರೆ, ಅತ್ತ ಸಿದ್ದು ಆಪ್ತ ಸಚಿವ ಸತೀಶ್ ಜಾರಕಿಹೊಳಿ ಪರವಾಗಿ ಬಿಜೆಪಿ ಶಾಸಕರು ಬ್ಯಾಟ್ ಬೀಸಿದ್ದಾರೆ. ಅವರೇ ಮುಖ್ಯಮಂತ್ರಿಯಾಗಲಿ ಅಂತಿದ್ದಾರೆ. ಮುಖ್ಯಮಂತ್ರಿ ಪಟ್ಟದ ಮೇಲೆ ಹತ್ತಾರು ಕಣ್ಣು.. ಯಾರೇ ಕನಸು ಕಂಡ್ರೂ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ.. ಆದ್ರೆ ಸದ್ಯದಲ್ಲೇ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡ್ತಾರೆ ಅಂತ ಎದೆ ತಟ್ಟಿ ಹೇಳ್ತಾ ಇದ್ದಾರೆ ಕಮಲದಳ ನಾಯಕರು. ಕಾರಣ ಹೈಕೋರ್ಟ್'ನಲ್ಲಿ ನಡೀತಾ ಇರೋ ಕೇಸ್.. ಹಾಗಾದ್ರೆ ಸಿದ್ದರಾಮಯ್ಯನವರ ಪಾಲಿಗೆ ಗುರುವಾರವೇ ಡಿಸೈಡಿಂಗ್ ಡೇ ಆಗಲಿದೆ. 

Video Top Stories