ಸಿಎಂ ಪಟ್ಟದ ಹಗ್ಗಜಗ್ಗಾಟ: ಸಿದ್ದು ಟೀಮ್ ವಿರುದ್ಧ ಡಿಕೆಶಿ ಒಂಟಿಯಾಗಿ ಸೈಲೆಂಟ್ ಗೇಮ್ ಆಡ್ತಿರೋದ್ಯಾಕೆ?

ಮುಖ್ಯಮಂತ್ರಿ ಪಟ್ಟಕ್ಕಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬೆಂಬಲಿಗರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಡಿಕೆ ಶಿವಕುಮಾರ್ ಸೈಲೆಂಟ್ ಆಗಿ ಒಂಟಿ ಯುದ್ಧ ಶುರು ಮಾಡಿದ್ದಾರೆ. ಈ ಸೈಲೆಂಟ್ ಗೇಮ್ ಸಿಂಹಾಸನವೇರುವ ಗುರಿ ಮುಟ್ಟುತ್ತಾ ಎಂಬುದನ್ನು ಕಾದು ನೋಡಬೇಕಿದೆ.

First Published Jan 12, 2025, 9:47 PM IST | Last Updated Jan 12, 2025, 9:49 PM IST

ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಗ್ಗಜಗ್ಗಾಟ ಶುರುವಾಗಿದೆ. ಇದರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿದೇಶಕ್ಕೆ ಹೋಗಿ ಮರಳಿ ಬಂದ ನಂತರ ರಾಜ್ಯದಲ್ಲಿ ನಿಂತಲ್ಲಿ ನಿಲ್ಲದೇ ದೆಹಲಿ, ಟೆಂಪಲ್ ರನ್ ಹಾಗೂ ಮೀಟಿಂಗ್‌ಗಳನ್ನು ಮಾಡಲು ಮುಂದಾಗಿದ್ದಾರೆ. ಆದರೆ, ಇವರ ನಡೆಗೆ ವಿರುದ್ಧವಾಗಿ ಸಿದ್ದರಾಮಯ್ಯ ಅವರ ಬೆಂಬಲಿಗರು ಬಣವಾಗಿ ಒಗ್ಗಟ್ಟಿನ ಮೂಲಕ ಡಿನ್ನರ್ ಮೀಟಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ, ಇದೆಲ್ಲವನ್ನು ನೋಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ರ ಒಬ್ಬಂಟಿಯಾಗಿದ್ದಾರೆ ಎಂಬ ದೃಶ್ಯ ಕಂಡುಬರುತ್ತಿದೆ. ಇದೆಲ್ಲದರ ನಡುವೆ ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂಬ ಘೋಷನೆಯೂ ಮೊಳಗಿದೆ. ಆದರೂ, ಡಿ.ಕೆ. ಶಿವಕುಮಾರ್ ಮಾತ್ರ ಯಾವುದಕ್ಕೂ ತುಟಿ ಬಿಚ್ಚದೇ ಸುಮ್ಮನೇ ಎಲ್ಲವನ್ನೂ ನೋಡುತ್ತಿದ್ದಾರೆ.

ಆದರೆ, ಸಿಎಂ ಕುರ್ಚಿಯ ಯುದ್ಧದಲ್ಲಿ ಡಿಕೆ ಶಿವಕುಮಾರ್ ಏಕಾಂಗಿಯಂತೂ ಅಲ್ಲ. ಅವ್ರ ಹಿಂದೆಯೂ ಒಂದು ಸೈನ್ಯ ಇದೆ.. ಆದರೆ, ಸದ್ಯಕ್ಕೆ ಸೈಲೆಂಟ್ ಆಗಿರುವ ಶಿವಕುಮಾರ್ ಒಂಟಿಯುದ್ಧ ಶುರು ಮಾಡಿದ್ದಾರೆ. ಶಸ್ತ್ರ, ಅಸ್ತ್ರ, ದಂಡು, ಸೇನೆ ಎಲ್ಲಾ ಇದ್ರೂ ಡಿಕೆ ಸೈಲೆಂಟಾಗಿರೋದ್ಯಾಕೆ ಎಂಬ ಪ್ರಶ್ನೆ ಕಾಡುತ್ತದೆ. ಡಿಕೆ ಶಿವಕುಮಾರ್ ಅವರ ಈ ಸೈಲೆಂಟ್ ಗೇಮ್, ಆ ಒಂಟಿಯುದ್ಧ ಸಿಂಹಾಸನವೇರುವ ಗುರಿ ಮುಟ್ಟುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಈಗ ಸಿದ್ದು ಸೇನೆಯ ಮಂತ್ರಿಗಳು ಕೆರಳಿಸಿದ್ರೂ ಡಿಕೆ ಕೆರಳುತ್ತಿಲ್ಲ. ಕೆಣಕಿದ್ರೂ ಕೌಂಟರ್ ಕೊಡ್ತಿಲ್ಲ.. ಡಿಕೆ ಶಿವಕುಮಾರ್ ಅವರ ಈ ಸೈಲೆಂಟ್ ಗೇಮ್ ಶುರು ಮಾಡಿದ್ದಾರೆ.

Video Top Stories