
ಹೈಕಮಾಂಡ್‌ಗೆ 2-3 ಪಟ್ಟಿ ಕೊಟ್ಟಿದ್ದೇನೆ, ಇಂದು ಅಂತಿಮ ಪಟ್ಟಿ ಪ್ರಕಟ: ಸಿಎಂ ಬೊಮ್ಮಾಯಿ
ಸಂಪುಟಕ್ಕೆ ಎಷ್ಟು ಜನರನ್ನು ಸೇರಿಸಬೇಕೆಂದು ಹೈಕಮಾಂಡ್ ತೀರ್ಮಾನಿಸುತ್ತದೆ. 2-3 ಪಟ್ಟಿಯನ್ನು ಕೊಟ್ಟಿದ್ದೇನೆ ಎಂದು ನಡ್ಡಾ ಭೇಟಿ ಬಳಿಕ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಆ. 03): ಸಂಪುಟಕ್ಕೆ ಎಷ್ಟು ಜನರನ್ನು ಸೇರಿಸಬೇಕೆಂದು ಹೈಕಮಾಂಡ್ ತೀರ್ಮಾನಿಸುತ್ತದೆ. 2-3 ಪಟ್ಟಿಯನ್ನು ಕೊಟ್ಟಿದ್ದೇನೆ ಎಂದು ನಡ್ಡಾ ಭೇಟಿ ಬಳಿಕ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕ ಸಂಪುಟ ರಚನೆಗೆ 9+9+8 ಸೂತ್ರ; ವರ್ಕೌಟ್ ಆಗುತ್ತಾ ಬೊಮ್ಮಾಯಿ, ಹೈಕಮಾಂಡ್ ತಂತ್ರ?
ಪಕ್ಷದಲ್ಲಿ ವಲಸಿಗ, ಬಿಜೆಪಿಗ ಎಂಬ ಭೇದ- ಭಾವ ಇಲ್ಲ, ಬಿಜೆಪಿಯಲ್ಲಿ ಯಾರೂ ವಲಸಿಗರಲ್ಲ, ಎಲ್ಲರೂ ನಮ್ಮವರೇ, ಇನ್ನೊಂದು ಸುತ್ತಿನ ಚರ್ಚೆ ಬಳಿಕ ಅಂತಿಮ ಪಟ್ಟಿ ಹೊರ ಬೀಳಲಿದೆ. ಬಳಿಕ ಪ್ರಮಾಣ ವಚನದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಒಟ್ಟಿನಲ್ಲಿ ನೂತನ ಸಂಪುಟ ಎಲ್ಲರಿಗೂ ತೃಪ್ತಿ ನೀಡುವಂತಿರುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ಧಾರೆ.