News Hour: ದೆಹಲಿಯಲ್ಲಿ ಸಚಿವರ ಪಟ್ಟಿ ಅಂತಿಮ, ಹೊಸ ಮುಖಗಳಿಗೆ ಆದ್ಯತೆ!
ಅಂತೂ ಇಂತೂ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಿಕ್ಕಿಯಾಗಿದೆ. 24 ಸಚಿವರ ಪಟ್ಟಿ ಅಂತಿಮವಾಗಿದ್ದು, ಬಹುತೇಕ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಜಾತೀವಾರು, ಪ್ರಾದೇಶಿಕವಾರು ಸಚಿವ ಸ್ಥಾನ ಹಂಚಲಾಗಿದೆ.
ಬೆಂಗಳೂರು (ಮೇ.26): ದೆಹಲಿಯಲ್ಲಿ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮ ಮಾಡಿದೆ. 24 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಜಾತಿವಾರು ಹಾಗೂ ಪ್ರಾದೇಶಿಕವಾರು ಲೆಕ್ಕಾಚಾರದಲ್ಲಿ ಕ್ಯಾಬಿನೆಟ್‌ಅನ್ನು ಅಂತಿಮ ಮಾಡಲಾಗಿದೆ. ಟಫ್ ಫೈಟ್ ನಡುವೆ ಎಂಎಲ್‌ಎ ಹಾಗೂ ಎಂಎಲ್‌ಸಿಯೂ ಅಲ್ಲದ ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಸರ್ಕಾರ ಹೊಸ ಮುಖಕ್ಕೆ ಆದ್ಯತೆ ನೀಡಿದೆ. ಭವಿಷ್ಯದ ದೃಷ್ಟಿಯಿಂದ ಯುವ ನಾಯಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರಿಂದಾಗಿ ಹಲವು ಹಿರಿಯ ನಾಯಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.
Karnataka Cabinet Expansion: 24 ನೂತನ ಸಚಿವರ ಪಟ್ಟಿ ಬಿಡುಗಡೆ, 7 ಲಿಂಗಾಯತರಿಗೆ ಸ್ಥಾನ
ಇನ್ನೊಂದೆಡೆ, ಸರ್ಕಾರ ಬಂದು ಇಷ್ಟು ದಿನಗಳಾದರೂ ಇನ್ನೂ ಐದು ಗ್ಯಾರಂಟಿ ಘೋಷಣೆ ಜಾರಿಯಾಗಿಲ್ಲ. ಇದರ ನಡುವೆ ವಿರೋಧ ಪಕ್ಷಗಳು ಕೂಡ ಕಾಂಗ್ರೆಸ್‌ನ ಗ್ಯಾರಂಟಿಗಾಗಿ ಪಟ್ಟು ಹಿಡಿದಿದೆ. ಆದಷ್ಟು ಬೇಗ ಇದು ಜಾರಿಯಾಗದೇ ಇದ್ದರೆ, ಹೋರಾಟ ಮಾಡಲು ಸಿದ್ಧ ಎಂದು ಬಿಜೆಪಿ ಹಾಗೂ ಜೆಡಿಎಸ್ ಹೇಳಿದೆ.