Asianet Suvarna News Asianet Suvarna News

Karnataka Cabinet Expansion: 24 ನೂತನ ಸಚಿವರ ಪಟ್ಟಿ ಬಿಡುಗಡೆ, 7 ಲಿಂಗಾಯತರಿಗೆ ಸ್ಥಾನ

 ಕಾಂಗ್ರೆಸ್ ಸರಕಾರದ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ.  ಒಟ್ಟು 24 ಮಂದಿಗೆ ಸಚಿವ  ಸ್ಥಾನ ನೀಡಲಾಗಿದೆ. 7 ಲಿಂಗಾಯತರಿಗೆ , ದಲಿತ ಸಮುದಾಯಕ್ಕೆ 9 ಸಚಿವ ಸ್ಥಾನ ಸಿಕ್ಕಿದೆ.

Karnataka Cabinet expansion  Congress Finalises  24 ministers  name gow
Author
First Published May 26, 2023, 10:07 PM IST

ಬೆಂಗಳೂರು (ಮೇ.26): ಅಂತೂ ಇಂತೂ ಕಾಂಗ್ರೆಸ್ ಸರಕಾರದ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಈ ಮೂಲಕ ಜೋಡೆತ್ತು ಸರಕಾರದ ಸಚಿವ ಸಂಪುಟ ವಿಸ್ತರಣೆ ವಿಸ್ತರಣೆಯಾಗಿದೆ. ನಾಳೆ 11.45 ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದ್ದು, ಕಾಂಗ್ರೆಸ್ ಇಂದು 24 ಸಚಿವರ ಹೆಸರು ಬಿಡುಗಡೆ ಗೊಳಿಸಿದೆ. ಸಮುದಾಯದ ಆಧಾರದಲ್ಲಿ ಈ ಬಾರಿ ಸಚಿವರ ಸ್ಥಾನ ಹಂಚಲಾಗಿದೆ. ನೂತನ ಸಚಿವರ ಪಟ್ಟಿ ಇಂತಿದೆ.

Karnataka Cabinet expansion  Congress Finalises  24 ministers  name gow

ನೂತನ ಸಚಿವರು, ಕ್ಷೇತ್ರವಾರು:

ಹೆಚ್‌ಕೆ ಪಾಟೀಲ್‌ - ಗದಗ
ಕೃಷ್ಣ ಭೈರೇಗೌಡ- ಬ್ಯಾಟರಾಯನಪುರ
ಎನ್‌,ಚೆಲುವರಾಯಸ್ವಾಮಿ- ನಾಗಮಂಗಲ
 ಕೆ. ವೆಂಕಟೇಶ್‌- ಪಿರಿಯಾಪಟ್ಟಣ
ಎಚ್‌ಸಿ ಮಹದೇವಪ್ಪ- ಟಿ ನರಸೀಪುರ
ಈಶ್ವರ್‌ ಖಂಡ್ರೆ- ಬಾಲ್ಕಿ
ಕ್ಯಾತಸಂದ್ರ ಎನ್‌ ರಾಜಣ್ಣ- ಮಧುಗಿರಿ
ದಿನೇಶ್‌ ಗುಂಡೂರಾವ್- ಗಾಂಧಿನಗರ
ಶರಣ ಬಸಪ್ಪ ದರ್ಶನಾಪುರ- ಶಹಪುರ
ಶಿವಾನಂದ ಪಾಟೀಲ್‌- ಬಸವನಭಾಗೇವಾಡಿ
ತಿಮ್ಮಾಪುರ ರಾಮಪ್ಪ ಬಾಳಪ್ಪ- ಮುದೋಳ
ಎಸ್‌ಎಸ್‌ ಮಲ್ಲಿಕಾರ್ಜುನ- ದಾವಣಗೆರೆ ಉತ್ತರ 
ಶಿವರಾಜ್‌ ತಂಗಡಗಿ- ಕನಕಗಿರಿ
ಶರಣಪ್ರಕಾಶ್‌ ಪಾಟೀಲ್‌- ಸೇಡಂ
ಮಂಕಾಳ ವೈದ್ಯ- ಭಟ್ಕಳ
ಲಕ್ಷ್ಮೀ ಆರ್‌ ಹೆಬ್ಬಾಳಕರ್‌- ಬೆಳಗಾವಿ ಗ್ರಾಮಾಂತರ
ರಹೀಂ ಖಾನ್‌- ಬೀದರ್
ಡಿ.ಸುಧಾಕರ್‌- ಹಿರಿಯೂರು
ಸಂತೋಷ್‌ ಲಾಡ್‌- ಕಲಘಟಗಿ
ಎನ್‌ಎಸ್‌ ಬೋಸರಾಜು- ಎಐಸಿಸಿ ಕಾರ್ಯದರ್ಶಿ
ಬೈರತಿ ಸುರೇಶ್‌- ಹೆಬ್ಬಾಳ
ಮಧು ಬಂಗಾರಪ್ಪ- ಸೊರಬ
ಎಂಸಿ ಸುಧಾಕರ್‌- ಚಿಂತಾಮಣಿ
ಬಿ.ನಾಗೇಂದ್ರ- ಬಳ್ಳಾರಿ ಗ್ರಾಮೀಣ

ಲಿಂಗಾಯತ ಸಮುದಾಯದ 7 ಜನರಿಗೆ ಸಚಿವ ಸ್ಥಾನ: ಲಿಂಗಾಯತ ಸಮುದಾಯಕ್ಕೆ ಒಟ್ಟು ಏಳು ಸಚಿವ ಸ್ಥಾನ ನೀಡಲಾಗಿದ್ದು  ಈ ಸಮುದಾಯದ ಬಹುತೇಕ ಎಲ್ಲಾ ಪ್ರಮುಖ ಒಳಪಂಗಡಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಬಣಜಿಗರಲ್ಲಿ ಈಶ್ವರ್ ಖಂಡ್ರೆ, ಪಂಚಮಸಾಲಿಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಿವಾನಂದ ಪಾಟೀಲ್, ಕುರು ಒಕ್ಕಲಿಗರಲ್ಲಿ ಎಂ.ಬಿ.ಪಾಟೀಲ್, ಸಾದ ಲಿಂಗಾಯತರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್, ಆದಿ ಬಣಜಿಗರಲ್ಲಿ ಶರಣ ಪ್ರಕಾಶ ಪಾಟೀಲ್ ರೆಡ್ಡಿಲಿಂಗಾಯತರಲ್ಲಿ ದರ್ಶನಾಪುರ ಮತ್ತು ವೈಷ್ಣವ ರೆಡ್ಡಿಯ ಪ್ರತಿನಿಧಿಯಾಗಿ ಹೆಚ್.ಕೆ.ಪಾಟೀಲ್ ಅವರಿಗೆ ಪ್ರಾತಿನಿಧ್ಯ ದೊರೆತಿದೆ.

Karnataka Cabinet expansion  Congress Finalises  24 ministers  name gow

ಒಕ್ಕಲಿಗರಲ್ಲಿ 4 ಜನರಿಗೆ ಸಚಿವ ಸ್ಥಾನ:

ಒಕ್ಕಲಿಗರಲ್ಲಿ ಗಂಗಟಕಾರ್ ಒಕ್ಕಲಿಗರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಚೆಲುವರಾಯಸ್ವಾಮಿ ಅವರುಗಳು ಇದ್ದಾರೆ. ಪಿರಿಯಾಪಟ್ಟಣ ವೆಂಕಟೇಶ್ ಕುಂಚಟಿಗರು, ದಾಸ ಒಕ್ಕಲಿಗರಲ್ಲಿ ಕೃಷ್ಣ ಬೈರೇಗೌಡ ಸೇರಿ ನಾಲ್ಕು ಮಂದಿಗೆ ಪ್ರಾತಿನಿಧ್ಯ ದೊರೆತಿದೆ.

ದಲಿತ ಸಮುದಾಯಕ್ಕೆ ಬರೋಬ್ಬರಿ 9 ಸಚಿವ ಸ್ಥಾನ ಲಭಿಸಿದ್ದು
ಮುನಿಯಪ್ಪ, ಜಿ.ಪರಮೇಶ್ವರ್, ಹೆಸ್.ಸಿ.ಮಹದೇವಪ್ಪ, ತಿಮ್ಮಾಪುರ ಮತ್ತು ಪ್ರಿಯಾಂಕ್ ಖರ್ಗೆ ಅವರುಗಳು ಪರಿಶಿಷ್ಟ ಜಾತಿ ಖೋಟಾದಲ್ಲಿ ಸಚಿವರಾಗಿದ್ದಾರೆ. ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಸರಿದೂಗಿಸಲಾಗಿದೆ.  ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ನಾಗೇಂದ್ರ, ಮಧುಗಿರಿ ರಾಜಣ್ಣ, ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ದೊರೆತಿದೆ.  ವಿಧಾನ ಪರಿಷತ್ ಮುಖ್ಯ ಸಚೇತಕರಾಗಿರುವ ಪ್ರಕಾಶ್ ರಾಥೋಡ್ ಕೂಡ ಬಂಜಾರ ಸಮುದಾಯದವರು. 

ಡಿಕೆಶಿ Vs ಎಂ.ಬಿ ಪಾಟೀಲ್ ಜಿದ್ದಾಜಿದ್ದಿ ಶುರುವಾಗಿದ್ದು ಎಲ್ಲಿ ಗೊತ್ತಾ ?: ಮದಗಜ ಘರ್ಷಣೆ

ಹಿಂದುಳಿದ ಜಾತಿಗಳಲ್ಲಿ ಅತ್ಯಂತ ಸಣ್ಣ ಸಮುದಾಯ ರಜಪೂತರಾದ ಅಜಯ್‌ಸಿಂಗ್, ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಅತ್ಯಂತ ಸಣ್ಣ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬೆಸ್ತ ಸಮುದಾಯದ ಮಾಂಕಾಳ ವೈದ್ಯ, ಮರಾಠ ಸಮಾಜದಿಂದ ಸಂತೋಷ್ ಲಾಡ್  ಇದ್ದಾರೆ...

ಕುರುಬ ಸಮುದಾಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೈರತಿ ಸುರೇಶ್ ಅವರಿಗೆ ಮಾತ್ರ ಸಂಪುಟದೊಳಗೆ ಪ್ರವೇಶ ದೊರೆತಿದೆ. ಬಿಲ್ಲವ ಸಮುದಾಯದಿಂದ ಮಧು ಬಂಗಾರಪ್ಪ ಇದ್ದಾರೆ.

ಶಾಸಕ ಅಶೋಕ್‌ ರೈ ವಿರುದ್ಧ ಫೇಸ್‌ಬುಕ್‌ ಕೀಳು ಬರಹ: ಬಿಜೆಪಿ ವಿರುದ್ಧ ವಾಗ್ದಾಳಿ

ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್ ಖಾನ್, ರಹೀಂ ಖಾನ್ ಇಬ್ಬರು ಸಚಿವರಾಗಿದ್ದರೆ, ಯು.ಟಿ.ಖಾದರ್ ಸ್ಪೀಕರ್ ಆಗಿದ್ದಾರೆ. ಕ್ರೈಸ್ತ ಸಮುದಾಯದಿಂದ ಕೆ.ಜೆ.ಜಾರ್ಜ್ ಅವರಿಗೆ ಸಚಿವ ಸ್ಥಾನ ಒಲಿದಿದೆ. ಜೈನ ಸಮುದಾಯದಿಂದ ಡಿ.ಸುಧಾಕರ್ ಹಾಗೂ ಬ್ರಾಹ್ಮಣ ಸಮುದಾಯದ ಪ್ರತಿನಿಧಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ದೊರಕಿದೆ.

Follow Us:
Download App:
  • android
  • ios