ಚುನಾವಣೆ ಘೋಷಣೆ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಬ್ರೇಕ್?
ಶಿರಾ, ಆರ್‌ಆರ್ ನಗರ ಉಪಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಬ್ರೇಕ್ ಬಿದ್ದಂತಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ವಿಸ್ತರಣೆಗೆ ಪ್ಲಾನ್ ಮಾಡಿದ್ದರು ಸಿಎಂ ಯಡಿಯೂರಪ್ಪ. ಆದರೆ ಲೆಕ್ಕಾಚಾರ ತಲೆಕೆಳಗಾಗಿದೆ.
ಬೆಂಗಳೂರು (ಸೆ. 29): ಶಿರಾ, ಆರ್‌ಆರ್ ನಗರ ಉಪಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಬ್ರೇಕ್ ಬಿದ್ದಂತಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ವಿಸ್ತರಣೆಗೆ ಪ್ಲಾನ್ ಮಾಡಿದ್ದರು ಸಿಎಂ ಯಡಿಯೂರಪ್ಪ. ಅಕ್ಟೋಬರ್ 2 ರಂದು ದೆಹಲಿಗೆ ತೆರಳಲು ಮುಂದಾಗಿದ್ಧಾರು ಸಿಎಂ. ಆದರೆ ಈಗ ಉಪಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ಶಿರಾ, RR ನಗರ ಬೈ ಎಲೆಕ್ಷನ್: ಕಾಂಗ್ರೆಸ್ ಅಧ್ಯಕ್ಷ ಡಿಕೆಶಿಗೆ ಸವಾಲಿನ ಚುನಾವಣೆ
ಸಂಪುಟ ವಿಸ್ತರಣೆಯಾದರೂ, ಪುನಾರಚನೆಯಾದರೂ ಒಂದಷ್ಟು ಅಸಮಾಧಾನ ಏಳುವುದು ಸಹಜ. ಅದು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗಾಗಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!