ಕರ್ನಾಟಕ ಉಪಚುನಾವಣೆ: ಹಳೇ ಹುರಿಯಾಳುಗಳ ಹೋರಾಟ, ಮತ್ತೆ ಸಿಗ್ತಾರಾ ಈ ನಾಯಕರು!

ಕರ್ನಾಟಕದ ಉಪಚುನಾವಣೆಯಲ್ಲಿ ದೇವೇಗೌಡ, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಅಬ್ಬರದ ಪ್ರಚಾರ ನಡೆದಿದೆ. ಇಳಿ ವಯಸ್ಸಿನಲ್ಲಿಯೂ ಚುನಾವಣಾ ರಣರಂಗದಲ್ಲಿ ಮತಬೇಟೆಯಾಡಿದ ಮಾಸ್ ಲೀಡರ್‌ಗಳು ಮತ್ತೆ ಸಿಗ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

First Published Nov 12, 2024, 11:52 AM IST | Last Updated Nov 12, 2024, 11:52 AM IST

ಬೆಂಗಳೂರು (ನ.12): ಕರ್ನಾಟಕದ ಉಪಚುನಾವಣೆಯ ಕ್ಷೇತ್ರಗಳಾದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿಯಲ್ಲಿ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಬಿದ್ದಾಯ್ತು. ಇನ್ನೇನಿದ್ರು ಹೋರಾಟದ ಪ್ರತಿಫಲದ ನಿರೀಕ್ಷೆ. ಇಲ್ಲಿ ಹೋರಾಟ ಅಂದುಕೂಡ್ಲೆ ಆ ಮೂವರು ಹುರಿಯಾಳುಗಳ ಅಬ್ಬರದ.. ಆರ್ಭಟದ ಪ್ರಚಾರ ಕಣ್ಮುಂದೆ ಬರುತ್ತೆ. 92ನೇ ವಯಸ್ಸಿನಲ್ಲಿಯೂ ಗುಡುಗಿರುವ ಗೌಡರು, ಗುಟುರು ಹಾಕತ್ತಾ ಅಶ್ವಮೇಧಯಾಗ ನಡೆಸಿದ ಟಗರು. ಚುನಾವಣಾ ರಣರಂಗದಲ್ಲಿ ಮತಬೇಟೆಯಾಡಿದ ರಾಜಾಹುಲಿ. ದಣಿವರಿಯದ ನಾಯಕರ ಪವರ್ ಪ್ರದರ್ಶನಕ್ಕೆ ಸಾಕ್ಷಿಯಾಗೋರೋದು ಮಿನಿ ದಂಗಲ್. ಹಾಗಿದ್ರೆ, ಉಪಚುನಾವಣಾ ಸಂಗ್ರಾಮದಲ್ಲಿ ಹಳೇ ಹುರಿಯಾಳುಗಳ ಹೋರಾಟ ಹೇಗಿತ್ತು.?

ದೇವೇಗೌಡ್ರು, ಸಿದ್ದರಾಮಯ್ಯ ಅವರಂತೆ ಉಪಚುನಾವಣೆಯಲ್ಲಿ ರಾಜಾಹುಲಿಯ ಘರ್ಜನೆಯೂ ಜೋರಾಗಿತ್ತು. ದೇವೇಗೌಡ್ರು, ಸಿದ್ದರಾಮಯ್ಯ ತರಾನೇ ಇತ್ತ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೂರು ಕ್ಷೇತ್ರಗಳನ್ನು ಸುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಅದೇ ಹುಮ್ಮಸ್ಸಿನಲ್ಲಿ.. ಅದೇ ಅಬ್ಬರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ದೇವೇಗೌಡ್ರು, ಯಡಿಯೂರಪ್ಪ, ಸಿದ್ದರಾಮಯ್ಯ. ಇವರೆಲ್ಲಾ ಕರ್ನಾಟಕದ ಮಾಸ್ ಲೀಡರ್ಗಳು..ಇಂಥಹ ಮಾಸ್ ಲೀಡರ್‌ಗಳು ನಮ್ಮ ರಾಜ್ಯಕ್ಕೆ ಮತ್ತೆ ಸಿಗ್ತಾರಾ ಅನ್ನೋ ಪ್ರಶ್ನೆ ಉದ್ಭವಿಸಿದೆ.