News Hour: ಸದನದಲ್ಲಿ ಕುಮಾರಸ್ವಾಮಿ ಜಮದಗ್ನಿ, ಕಂಪಿಸಿದ ಕಾಂಗ್ರೆಸ್‌ ಪಾಳಯ!

ಇಂದು ಸದನ ಮಂಡ್ಯ ವಿಚಾರದಲ್ಲಿ ಅಕ್ಷರಶಃ ರಣಾಂಗಣವಾಗಿತ್ತು. ಕುಮಾರಸ್ವಾಮಿ ಜಮದಗ್ನಿಯ ರೂಪ ತಾಳಿದಂತೆ, ಕಾಂಗ್ರೆಸ್‌ನ ಕಂಡ ಕಂಡ ಸಚಿವರನ್ನು ಮಾತಿನ ಬಾಣದಿಂದ ತಿವಿಯುತ್ತಿದ್ದರು. ಒಂದು ಹಂತದಲ್ಲಿ ಕುಮಾರಸ್ವಾಮಿ ಹಾಗೂ ಸಿಎಂ ಸಿದ್ಧರಾಮಯ್ಯ ನೇರಾನೇರ ಫೈಟ್‌ಗೆ ಇಳಿದಿದ್ದರು.
 

Share this Video
  • FB
  • Linkdin
  • Whatsapp

ಬೆಂಗಳೂರು (ಜು.6): ನಾಗಮಂಗಲದ ಕೆಎಸ್‌ಆರ್‌ಟಿಸಿ ನೌಕರನ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ವಿಧಾನಸಭೆಯಲ್ಲಿ ಇಂದು ಸಿಎಂ ಸಿದ್ಧರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆಯಿತು. ಈ ವೇಳೆ ಕುಮಾರಸ್ವಾಮಿ ಇದು ಕೊಲೆಗಡುಕ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಸದನದಲ್ಲಿ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ಬೆಂಕಿ-ಬಿರುಗಾಳಿ ನಿಲ್ಲುವ ಲಕ್ಷಣ ಕಾಣದೇ ಇದ್ದಾಗ ಸ್ಪೀಕರ್‌ ಯುಟಿ ಖಾದರ್‌ ಸದನವನ್ನು ಕೆಲ ಕಾಲ ಮುಂದೂಡಿದರು. ಬಳಿಕ ನಡೆದ ಸಂಧಾನ ಸಭೆಯಲ್ಲಿ ಸರ್ಕಾರ ತನಿಖೆಯ ಭರವಸೆ ನೀಡಿದ ಬಳಿಕ ಎಚ್‌ಡಿ ಕುಮಾರಸ್ವಾಮಿ ತಣ್ಣಗಾದರು.

'ನಾಚಿಕೆ ಆಗುವಂಥದ್ದು ನಾನೇನ್‌ ಮಾಡಿದ್ದೇನೆ..ಸುಮ್ನೆ ಕುಂತ್ಕೋ' ಚಲುವರಾಯಸ್ವಾಮಿಗೆ ಎಚ್‌ಡಿಕೆ ಸಿಟ್ಟು

ಮಂಡ್ಯ ಡಿಎಚ್‌ಓ ಸ್ಥಾನಕ್ಕೆ ಚೆಲುವರಾಯಸ್ವಾಮಿ ತಮ್ಮ ಅಣ್ಣನ ಮಗ ಡಾ.ಮೋಹನ್‌ ಅವರನ್ನು ನೇಮಿಸಿರುವುದು ಕೂಡ ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ಆತನ ಮೇಲೆ ತನಿಖೆ ಆಗಿದೆ ಅವರನ್ನ ಡಿಎಚ್‌ಓ ಆಗಿ ನೇಮಿಸಿದ್ದಾರೆ ಎಂದು ಎಚ್‌ಡಿಕೆ ಹೇಳಿದ್ದರೆ, ಶಾಸಕರ ಮನವಿ ಮೇರೆಗೆ ಅವರ ವರ್ಗಾವಣೆ ಮಾಡಲಾಗಿದೆ ಎಂದು ಕೃಷಿ ಸಚಿವ ಹೇಳಿದ್ದಾರೆ.

Related Video